ದೋಣಿ ಮುಳುಗಿ ಘೋರ ದುರಂತ: 6 ಮಹಿಳಾ ಕಾರ್ಮಿಕರು ಸಾವು

ಮುಂಬೈ: ಗಡ್ಚಿರೋಲಿಯ ಚಾಮೋರ್ಶಿ ತಾಲೂಕಿನಲ್ಲಿ ದೋಣಿ ಮುಳುಗಿದ ಪರಿಣಾಮ 6 ಮಂದಿ ಕೂಲಿ ಕಾರ್ಮಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವೈನಗಂಗಾ ನದಿಯಲ್ಲಿ ಈ ಅಹಿತಕರ ಘಟನೆ ನಡೆದಿದೆ. ಓರ್ವ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೆಣಸಿನಕಾಯಿ ಕೊಯ್ಲಿಗೆ ತೆರಳಿದ್ದ ಮಹಿಳೆಯರು ನದಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಮಗುಚಿ ಬಿದ್ದ ನಂತರ ಬೋಟ್ ರೋವರ್ ಈಜಬಲ್ಲ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರಂತದ ವಿಚಾರ ಕಾಳ್ಗಿಚ್ಚಿನಂತೆ ಹತ್ತಿರದ ಹಳ್ಳಿಗಳಾದ್ಯಂತ ಹರಡಿ ವೀಕ್ಷಿಸಲು ಜನರು ಸ್ಥಳದಲ್ಲಿ ಜಮಾಯಿಸಿದರು. ಗಣಪುರದಿಂದ ಚಂದ್ರಾಪುರಕ್ಕೆ ಪ್ರಯಾಣಿಸಲು, ಸರಿಯಾದ ರಸ್ತೆ ಮೂಲಸೌಕರ್ಯ ಮತ್ತು ಸಾರಿಗೆ ಸೌಲಭ್ಯಗಳು ಇಲ್ಲದಿರುವುದರಿಂದ ನದಿಯ ಮೂಲಕ ದೋಣಿ ಸಾರಿಗೆಯನ್ನು ಅವಲಂಬಿಸಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read