ಕರ್ನಾಟಕದ ಜನತೆಗೆ ಗುಡ್‌ ನ್ಯೂಸ್:‌ ಮತ್ತೊಂದು ʼವಂದೇ ಭಾರತ್‌ʼ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ. ಇದೇ ತಿಂಗಳ 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಮತ್ತೊಂದು ʼವಂದೇ ಭಾರತ್ʼ ಎಕ್ಸ್ ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ.

ನೈಋತ್ಯ ರೈಲ್ವೆ (SWR) ರೈಲು ಉದ್ಘಾಟನೆ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 489 ಕಿಮೀ ದೂರವನ್ನ ತಲುಪಲು ವಂದೇ ಭಾರತ್ ಎಕ್ಸ್ ಪ್ರೆಸ್ 110 ಕಿಮೀ ವೇಗದಲ್ಲಿ ಚಲಿಸುತ್ತದೆ ಎಂದಿದೆ.

ಧಾರವಾಡ-ಕೆಎಸ್‌ಆರ್ ಬೆಂಗಳೂರು ಉದ್ಘಾಟನಾ ವಿಶೇಷ ರೈಲು ಜೂನ್ 27 ರಂದು ಬೆಳಿಗ್ಗೆ 10:30 ಕ್ಕೆ ಧಾರವಾಡದಲ್ಲಿ ಫ್ಲ್ಯಾಗ್ ಆಫ್ ಆಗಲಿದೆ ಮತ್ತು ಐದು ನಿಮಿಷಗಳ ನಂತರ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣ ಬೆಂಗಳೂರಿಗೆ ಹೊರಡಲಿದೆ. ಪ್ರಯಾಣಿಕರಿಗೆ ನಿಯಮಿತ ಸೇವೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲವಾದರೂ, ಜೂನ್ 28 ರಂದು ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.

ವಾರದಲ್ಲಿ ಆರು ದಿನಗಳು (ಮಂಗಳವಾರದಂದು ಹೊರತುಪಡಿಸಿ) ನಿಯಮಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಈ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲ್ಲುತ್ತದೆ.

ಜೂ.27 ರಂದು ನೂತನ ವಂದೇ ಭಾರತ್ ರೈಲು ಉದ್ಘಾಟನಾ ಸಮಯ:

ಹುಬ್ಬಳ್ಳಿ (ಬೆಳಿಗ್ಗೆ 11/11.05), ಹಾವೇರಿ (ಮಧ್ಯಾಹ್ನ 12.05/12.06), ರಾಣೆಬೆನ್ನೂರು (ಮಧ್ಯಾಹ್ನ 12.26/12.27), ಹರಿಹರ (ಮಧ್ಯಾಹ್ನ 12.44/12.45), ದಾವಣಗೆರೆ (ಮಧ್ಯಾಹ್ನ 12.58/ 1/1), ಚಿಕ್ಕಜಾಜೂರು (ಮಧ್ಯಾಹ್ನ 1.29/1.30), ಬೀರೂರು (ಮಧ್ಯಾಹ್ನ 2.11/2.12), ಅರಸೀಕೆರೆ (ಮಧ್ಯಾಹ್ನ 2.43/2.44), ತಿಪಟೂರು (ಮಧ್ಯಾಹ್ನ 3.03/3.04), ಅಮ್ಮಸಂದ್ರ (ಮಧ್ಯಾಹ್ನ 3.23/3.24) , ತುಮಕೂರು (3.51 pm/3.52 pm), ದೊಡ್ಡಬೆಲೆ (4.12 pm/4.13 pm), ಚಿಕ್ಕಬಾಣಾವರ (4.30 pm/4.31 pm), ಯಶವಂತಪುರ (4.38 pm/4.40 pm) ಮತ್ತು KSR ಬೆಂಗಳೂರು (7.05 pm).

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read