ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ: 6 ಶಿಕ್ಷಕಿಯರು ಅರೆಸ್ಟ್

ಅಮೆರಿಕದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 6 ಶಿಕ್ಷಕಿಯರನ್ನು ಬಂಧಿಸಲಾಗಿದೆ.

ಆರು ಮಹಿಳಾ ಶಿಕ್ಷಕರನ್ನು ಎರಡು ದಿನಗಳ ಅವಧಿಯಲ್ಲಿ ಬಂಧಿಸಲಾಗಿದೆ. ಡ್ಯಾನ್‌ವಿಲ್ಲೆಯ ಎಲ್ಲೆನ್ ಶೆಲ್(38), ಇಬ್ಬರು 16 ವರ್ಷ ವಯಸ್ಸಿನ ಇಬ್ಬರು ಹುಡುಗರೊಂದಿಗೆ ಸಂಬಂಧ ಹೊಂದಿದ್ದು, ಮೂರು ಸಂದರ್ಭಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಗುರುವಾರ ಆಕೆಯನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವುಡ್‌ ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿರಾಗಿ ಶೆಲ್ ಕೆಲಸ ಮಾಡಿದರು. ಅದಕ್ಕೂ ಮೊದಲು ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು.

ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಅವರು ಪ್ರಥಮ ದರ್ಜೆಯ ಅಪರಾಧದ ಅತ್ಯಾಚಾರವನ್ನು ಎದುರಿಸುತ್ತಿದ್ದಾರೆ. ಆಕೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಅರ್ಕಾನ್ಸಾಸ್ ಟೈಮ್ಸ್ ವರದಿ ಮಾಡಿದೆ.

ಒಕ್ಲಹೋಮಾದ ಎಮಿಲಿ ಹ್ಯಾನ್‌ಕಾಕ್(26), ವಿದ್ಯಾರ್ಥಿಯೊಂದಿಗಿನ ಸಂಬಂಧದ ಬಗ್ಗೆ ಸ್ಥಳೀಯ ಪೊಲೀಸರಿಗೆ ಸುಳಿವು ನೀಡಿದ ನಂತರ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಲಿಂಕನ್ ಕೌಂಟಿಯ ಬದಲಿ ಶಿಕ್ಷಕಿಯೊಬ್ಬರು 15 ವರ್ಷದ ವಿದ್ಯಾರ್ಥಿಯೊಂದಿಗೆ ಹೊಂದಿದ್ದ ಅನುಚಿತ ಸಂಬಂಧಕ್ಕೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದೆ. ಬದಲಿ ಶಿಕ್ಷಕಿ ಎಮ್ಮಾ ಡೆಲಾನಿ ಹ್ಯಾನ್‌ಕಾಕ್ ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. Snapchat ನಲ್ಲಿಯೂ ಸಂವಹನ ನಡೆಸಿದ್ದು, ಶಾಲೆಯ ಕಟ್ಟಡದೊಳಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಹೇಳಲಾಗಿದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅಯೋವಾದ ಡೆಸ್ ಮೊಯಿನ್ಸ್‌ ನಲ್ಲಿರುವ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಕ್ರಿಸ್ಟನ್ ಗ್ಯಾಂಟ್(36), ಹದಿಹರೆಯದ ವಿದ್ಯಾರ್ಥಿಯೊಂದಿಗೆ ಐದು ಬಾರಿ ತನ್ನ ಶಾಲೆಯ ಒಳಗೆ ಮತ್ತು ಹೊರಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಶುಕ್ರವಾರ ಬಂಧಿಲಾಯಿತು.

ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಅಲಿಹ್ ಖೇರದ್‌ಮಂಡ್ ಎಂಬ 33 ವರ್ಷದ ಶಿಕ್ಷಕಿ ಹಲವಾರು ತಿಂಗಳುಗಳ ಅವಧಿಯಲ್ಲಿ ವಿದ್ಯಾರ್ಥಿಯನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡ ಆರೋಪ ಹೊಂದಿದ್ದಾರೆ.

ಪೆನ್ಸಿಲ್ವೇನಿಯಾದ ಜಾವೆಲಿನ್ ತರಬೇತುದಾರ ಶಿಕ್ಷಕಿ ತಾನು ತರಬೇತಿ ನೀಡಿದ 17 ವರ್ಷದ ಹುಡುಗನೊಂದಿಗೆ ಲೈಂಗಿಕ ದುರ್ವರ್ತನೆಗಾಗಿ ಬಂಧಿಸಲ್ಪಟ್ಟಿದ್ದಾಳೆ.

ಹನ್ನಾ ಮಾರ್ತ್(26) ಅವರು ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ನೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಕಂಡುಕೊಂಡ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read