ಬೆಂಗಳೂರು : ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಂಚಾರಿ ಇ-ಚಲನ್ ಮುಖಾಂತರ ದಾಖಲಾದ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ನೀಡಲಾಗಿರುವ ಶೇ.50ರಷ್ಟು ರಿಯಾಯಿತಿ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
2ನೇ ದಿನವಾದ ಭಾನುವಾರ 1.07 ಲಕ್ಷ ಪ್ರಕರಣಗಳಲ್ಲಿ 3.01 ಕೋಟಿ ರು. ದಂಡ ಸಂಗ್ರಹವಾಗಿದೆ. ಎರಡನೇ ದಿನ 1.07 ಲಕ್ಷ ಪ್ರಕರಣಗಳಲ್ಲಿ 3.01 ಕೋಟಿ ರು. ದಂಡ ಸಂಗ್ರಹವಾಗಿದೆ. ಮೊದಲ 1.48 ಲಕ್ಷ ಪ್ರಕರಣಗಳಲ್ಲಿ 4.18 ಕೋಟಿ ರು. ದಂಡ ಸಂಗ್ರಹವಾಗಿತ್ತು. ಈ ಎರಡೂ ದಿನಗಳಲ್ಲಿ ಒಟ್ಟು 2.56 ಲಕ್ಷ ಪ್ರಕರಣಗಳಲ್ಲಿ 7.19 ಕೋಟಿ ರು. ದಂಡ ಸಂಗ್ರಹವಾಗಿದೆ.
ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗಳ ಹಳೇ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಸೆ.19ರ ವರೆಗೆ ಈ 5.500 ರಿಯಾಯಿತಿಗೆ ಅವಕಾಶ ಕಲಿಸಲಾಗಿದೆ.