ತುಷಾರ್ ಶೆಲಾರ್ ನಿರ್ದೇಶನದ ಠಾಕೂರ್ ಅನೂಪ್ ಸಿಂಗ್ ಅಭಿನಯದ ‘ಧರ್ಮ ರಕ್ಷಕ್ ಮಹಾವೀರ್ ಛತ್ರಪತಿ ಸಾಂಭಾಜಿ ಮಹಾರಾಜ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈ ಚಿತ್ರ ಇದೀಗ 50 ದಿನಗಳನ್ನು ಪೂರೈಸಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.
ಈ ಚಿತ್ರವನ್ನು ಉರ್ವಿತಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಶೇಖರ ಮೋಹಿತೆ ಪಾಟೀಲ, ಸೌಜನ್ಯ ನಿಕಂ, ಧರ್ಮೇಂದ್ರ ಬೋರ, ಕೇತನರಾಜೆ ಭೋಸಲೆ, ನಿರ್ಮಾಣ ಮಾಡಿದ್ದು, ಮೋಹಿತ್ ಕುಲಕರ್ಣಿ ಸಂಗೀತ ಸಂಯೋಜನೆ ನೀಡಿದ್ದಾರೆ. ಶಿವ ಬಯಪ್ಪ ಅವರ ಸಂಕಲನ ಹಾಗೂ ಮಹೇಶ ಆನಿ ಛಾಯಾಗ್ರಹಣವಿದೆ. ಠಾಕೂರ್ ಅನೂಪ್ ಸಿಂಗ್ ಸೇರಿದಂತೆ ಅಮೃತಾ ಖಾನ್ವಿಲ್ಕರ್, ಕಿಶೋರಿ ಶಹಾನೆ, ಕಿಶೋರಿ ಶಹಾನೆ, ಭಾರ್ಗವಿ ಚಿರ್ಮುಲೆ, ಪಲ್ಲವಿ ವೈದ್ಯ, ಪ್ರದೀಪ್ ರಾವತ್, ಉಜ್ವಲ್ ಚೋಪ್ರಾ, ಕಮಲೇಶ್ ಸಾವಂತ್, ಶ್ರದ್ಧಾ ಶಿಂಧೆ, ತೆರೆ ಹಂಚಿಕೊಂಡಿದ್ದಾರೆ.