ಕಾಂಗ್ರೆಸ್ ನ 50 ಶಾಸಕರು `BJP’ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿದ್ದಾರೆ : ಮುರುಗೇಶ್ ನಿರಾಣಿ ಹೊಸ ಬಾಂಬ್

ವಿಜಯಪುರ  : ರಾಜ್ಯ ಕಾಂಗ್ರೆಸ್ ನ 50 ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ  ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಎರಡಲ್ಲ, ನಾಲ್ಕು ಬಣಗಳಿವೆ. ನಾವು ಸರ್ಕಾರವನ್ನು ಬೀಳಿಸುವುದಿಲ್ಲ. ತಾನಾಗೇ ಸರ್ಕಾರ ಪತನವಾಗುತ್ತದೆ. ಕಾಂಗ್ರೆಸ್ ನ 50 ಜನ ಬಿಜೆಪಿ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿದೆ. 5 ವರ್ಷ ಅಧಿಕಾರದಲ್ಲಿರೋದು ಅನುಮಾನ ಎಂದು ಹೇಳಿದ್ದಾರೆ.

50 ಜನ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿದ್ದಾರೆ. ಡಿಸಿಎಂ ಆಕಾಂಕ್ಷಿ ಸಚಿವರು, ಸಚಿವ ಸ್ಥಾನ  ವಂಚಿತ ಶಾಸಕರು, ಅಸಮಾಧಾನಿತ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೇ ಬಂದು ಬಾಗಿಲು ತಟ್ಟುತ್ತಿದ್ದಾರೆ. ನಾವು ಸರ್ಕಾರ ಕೆಡವಲ್ಲ, ತಾನಾಗಿಯೇ ಪತನವಾಗುತ್ತೆ. ಸರ್ಕಾರ ಯಾವಾಗ ಪತನವಾಗುತ್ತೆ ಅಂತಾ ಕಾದು ನೋಡಿ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read