SHOCKING : ಮಹಿಳೆಯರ ಸಲಿಂಗ ಕಾಮಕ್ಕೆ 5 ತಿಂಗಳ ಕಂದಮ್ಮ ಬಲಿ : ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ.!

ತಮಿಳುನಾಡು : ಮಹಿಳೆಯರ ಸಲಿಂಗ ಕಾಮಕ್ಕೆ 5 ತಿಂಗಳ ಮಗು ಬಲಿಯಾದ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.. ಸ್ನೇಹಿತೆ ಜೊತೆ ಸರಸ ಸಲ್ಲಾಪ ನಡೆಸಲು ಮಗು ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕ್ರೂರ ತಾಯಿ ಹತ್ಯೆ ಮಾಡಿದ್ದಾಳೆ.

ತಮಿಳುನಾಡಿನ ಕೆಲಮಂಗಲಂ ಸಮೀಪ ಚಿನ್ನಟ್ಟಿಯಲ್ಲಿ ಈ ಘಟನೆ ನಡೆದಿದೆ. ಸ್ನೇಹಿತೆ ಜೊತೆ ಸರಸ ಸಲ್ಲಾಪ ನಡೆಸಲು ಮಗು ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕ್ರೂರ ತಾಯಿ ಹತ್ಯೆ ಮಾಡಿದ್ದಾಳೆ.
ಭಾರತಿ (26) ಎಂಬ ಮಹಿಳೆ ಮದುವೆಯಾಗಿದ್ದರೂ ತನ್ನ ಸ್ನೇಹಿತೆ ಜೊತೆ ಸಲಿಂಗ ಕಾಮದಲ್ಲಿ ತೊಡಗುತ್ತಿದ್ದಳು . ಮಗು ಹುಟ್ಟಿದ ಬಳಿಕ ಈಕೆಯ ಸಲಿಂಗ ಕಾಮಕ್ಕೆ ಮಗು ಅಡ್ಡಿಯಾಗುತ್ತಿತ್ತು. ಬಳಿಕ ಮಗುವಿನ ಕತೆಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು.

ಸುರೇಶ್ ಹಾಗೂ ಭಾರತಿ ದಂಪತಿಗೆ ಒಬ್ಬರು ಹೆಣ್ಣು , ಒಂದು ಗಂಡು ಮಗುವಿತ್ತು. ಪತಿ ಕೆಲಸಕ್ಕೆ ಹೋದಾಗ ಅದೇ ಏರಿಯಾದ ಯುವತಿ ಸುಮಿತ್ರಾ ಜೊತೆ ಈಕೆ ಸೇರುತ್ತಿದ್ದಳು. ಸುಮಾರು 4 ವರ್ಷದಿಂದ ಇಬ್ಬರು ಸಲಿಂಗ ಕಾಮಿಗಳಾಗಿದ್ದರು.

ಸ್ನಾನ ಮಾಡುವಾಗ ಬೆತ್ತಲೆಯಾಗಿ ವಿಡಿಯೋ ಕಾಲ್

ಇಬ್ಬರು ಮೊಬೈಲ್ ನಲ್ಲಿ ಹರಟೋದು, ಸ್ನಾನ ಮಾಡುವಾಗ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡೋದು ಎಲ್ಲಾ ಮಾಡುತ್ತಿದ್ದರು. ಮಗು ಆದಾಗಿನಿಂದ ಭಾರತಿ ತನ್ನನ್ನು ದೂರು ಮಾಡುತ್ತಿದ್ದಾಳೆ ಎಂದು ಸುಮಿತ್ರಾ ಜಗಳ ಮಾಡುತ್ತಿದ್ದಳು. ಇಬ್ಬರ ನಡುವೆ ಜಗಳ ತಂದಿಟ್ಟ ಆ ಮಗುವನ್ನ ಕೊಲೆ ಮಾಡು ಎಂದು ಸುಮಿತ್ರ ಸಲಹೆ ನೀಡಿದ್ದಾಳೆ. ಅಂತೆಯೇ ಭಾರತಿ ತನ್ನ ಮಗುವನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ನಂತರ ಹಾಲು ಕುಡಿಸುವಾಗ ಉಸಿರುಗಟ್ಟಿ ಮಗು ಸತ್ತು ಹೋಯಿತು ಎಂದು ಬಿಂಬಿಸಿದ್ದಳು. ನಂತರ ಮನೆಯವರು ಮಗುವಿನ ಅಂತ್ಯಸಂಸ್ಕಾರ ಕೂಡ ಮಾಡಿದ್ದರು. ನಂತರ ಒಂದು ದಿನ ಭಾರತಿ ಮೊಬೈಲ್ ನೋಡಿ ಪತಿ ಸುರೇಶ್ ಶಾಕ್ ಆಗಿದ್ದಾನೆ. ಆತ ಅನುಮಾನ ಬಂದು ಪತ್ನಿ ಬಾಯಿ ಬಿಡಿಸಿದಾಗ ಆಕೆ ನಡೆದ ಘಟನೆಯನ್ನ ಹೇಳಿದ್ದಾಳೆ. ಬಳಿಕ ಸುರೇಶ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸುಮಿತ್ರಾ ಹಾಗೂ ಭಾರತಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read