ಸುಲಭವಾಗಿ ನಿರ್ವಹಿಸಿ ವಾರ್ಡ್ ರೋಬ್ ಕ್ಲೀನಿಂಗ್

ನಾವು ನಮ್ಮ ವಾರ್ಡೋಬ್ ಅನ್ನು ಹೇಗೆ ತುಂಬಿಸಿರುತ್ತೇವೆ ಅಂದರೆ ಅವಸರದಲ್ಲಿ ಏನನ್ನಾದರೂ ಹುಡುಕುವಾಗ ಅದು ನಮ್ಮ ಕೈಗೆ ಸಿಗುವುದೇ ಇಲ್ಲ. ಎಷ್ಟೇ ನೀಟಾಗಿ ಮಡಿಚಿಟ್ಟರೂ ಅವಸರದಲ್ಲಿ ಹುಡುಕುವಾಗ ಎಲ್ಲವನ್ನೂ ಮೇಲೆ ಕೆಳಗೆ ಮಾಡಿ ಹಾಳು ಮಾಡಿ ಬಿಡುತ್ತೇವೆ.

ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಲು ಕೆಲವು ಟಿಪ್ಸ್ ಗಳು ಇಲ್ಲವೆ ಕೇಳಿ. ನೀವು ಉಡುಪುಗಳನ್ನು ಮಡಿಚಿಡುವ ಮುನ್ನ ಅದರ ಮೇಲೆ ಪೇಪರ್ ಅಥವಾ ಸ್ವಚ್ಛವಾದ ಕಾಟನ್ ಬಟ್ಟೆಯನ್ನು ಹಾಕಲು ಮರೆಯದಿರಿ. ನಿತ್ಯ ಬಳಸುವ ಉಡುಪನ್ನು ಕೈಗೆಟಕುವಂತೆ ಮೇಲ್ಭಾಗದಲ್ಲೂ, ಸಭೆ ಸಮಾರಂಭಗಳ ಉಡುಪನ್ನು ಕೆಳಭಾಗದಲ್ಲಿ ಇಡಿ.

ಐರನ್ ಹಾಕಿದ ಮತ್ತು ಹಾಕದ ಉಡುಪನ್ನೂ ಪ್ರತ್ಯೇಕವಾಗಿಡಿ. ಬೆಲೆಬಾಳುವ ಉಡುಪನ್ನು ಪ್ರತ್ಯೇಕ ಪ್ಲಾಸ್ಟಿಕ್ ಕವರ್ ಗಳಲ್ಲಿ ಹಾಕಿಡಿ. ನಿಮ್ಮ ವಾರ್ಡ್ ರೋಬ್ ಮುಚ್ಚಳ ಆಗಾಗ ತೆಗೆದಿಡಿ. ಒಳಗೆ ಗಾಳಿಯಾಡಲು ಬಿಡಿ.

ಮಳೆಗಾಲದಲ್ಲಿ ಫಂಗಸ್ ಕಾಣಿಸಿಕೊಳ್ಳದಂತೆ ಆ್ಯಂಟಿ ಫಂಗಸ್ ಮಾತ್ರೆಗಳನ್ನಿಡಿ. ಅರ್ಧ ಒಣಗಿದ ಉಡುಪುಗಳನ್ನು ತಪ್ಪಿಯೂ ಒಳಗಿಡದಿರಿ.

ಹ್ಯಾಂಗರ್ ನಲ್ಲಿ ನೇತುಹಾಕುವುದರಿಂದ ಹೆಚ್ಚು ಜಾಗ ಉಳಿಯುತ್ತದೆ. ಮೇಕಪ್ ಸೆಟ್ ಒಳಗಿಡುವವರಾದರೆ ಅದಕ್ಕೆ ಪ್ರತ್ಯೇಕ ಬಾಕ್ಸ್ ಹಾಕಿ. ಸಾಕ್ಸ್, ಕರ್ಚೀಫ್ ಮತ್ತು ಟೈಗೆ ಪ್ರತ್ಯೇಕ ಜಾಗ ಮಾಡಿ. ಅದನ್ನು ಉಡುಪಿನ ಜೊತೆ ಮಿಕ್ಸ್ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read