43 ವರ್ಷಗಳ ಹಿಂದೆ IAF ಅಧಿಕಾರಿ ಮರಣ; ಪತ್ನಿಗೆ ಇಲಾಖೆ 1 ಕೋಟಿ ರೂ. ಬಾಕಿ ನೀಡಬೇಕಾದ ಮಾಹಿತಿ ಈಗ ಬಹಿರಂಗ

ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿಯೊಬ್ಬರು 43 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದು, ಅವರು ಮೃತಪಟ್ಟ 43 ವರ್ಷಗಳ ನಂತರ ಅವರ ಪತ್ನಿಗೆ ಇಲಾಖೆಯಿಂದ 1 ಕೋಟಿ ರೂ. ಬಾಕಿ ನೀಡಬೇಕಾಗಿತ್ತೆಂಬ ಸಂಗತಿ ಬಹಿರಂಗವಾಗಿದ್ದು, ಇದೀಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಘಟನೆ ವಿವರ: ಅಧಿಕಾರಿ ಚಂದ್ರಶೇಖರ್ ವಾರ್ಷಿಕ ರಜೆಯ ಮೇಲೆ ಲಕ್ನೋದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದಾಗ ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರು ಚಂಬಲ್‌ನಲ್ಲಿ ರೈಲಿನ ಮೇಲೆ ದಾಳಿ ನಡೆಸಿದ್ದರು.

ರೈಲಿನ ಮೇಲೆ ದಾಳಿ ನಡೆಸಿದಾಗ ಚೆನ್ನೈ (ಆಗಿನ ಮದ್ರಾಸ್) ಚಂದ್ರಶೇಖರ್ ಅವರು ವಾರ್ಷಿಕ ರಜೆಯ ಮೇಲೆ ಲಕ್ನೋದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಆಗ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ತಮ್ಮ ಪತ್ನಿ ಮತ್ತು ಅವರ ಎರಡು ವರ್ಷದ ಮಗನನ್ನು ಭೇಟಿಯಾಗಲು ಐಎಎಫ್ ಅಧಿಕಾರಿ ತೆರಳುತ್ತಿದ್ದರು. ಅವರ ಶೌರ್ಯಕ್ಕೆ ಮರಣೋತ್ತರವಾಗಿ 1982 ರಲ್ಲಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.

ಇದರ ಮಧ್ಯೆ ಚಂದ್ರಶೇಖರ್‌ ಅವರ ಪತ್ನಿ 1984 ರಲ್ಲಿ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿದ್ದು, 2002 ರಲ್ಲಿ ಮರುಮದುವೆಯಾದರು, ಇದರಿಂದಾಗಿ ಅವರ ಪಿಂಚಣಿ ನಿಲ್ಲಿಸಲಾಯಿತು. ಪತಿಯ ಶೌರ್ಯ ಪ್ರಶಸ್ತಿಯಿಂದಾಗಿ ಪಿಂಚಣಿ ಮತ್ತು ಭತ್ಯೆಗಳಿಗೆ ಅರ್ಹರಾಗಿದ್ದರೂ, ಅವರ ಹೆಸರಿನ ಕಾಗುಣಿತ ತಪ್ಪಾದ ಕಾರಣ ಮತ್ತು ದಾಖಲೆಗಳು ಸಾಕಷ್ಟಿಲ್ಲದ ಕಾರಣ ಪ್ರಯೋಜನಗಳನ್ನು ಪಡೆದಿರಲಿಲ್ಲ. ಇದೀಗ ಪ್ರಾಜೆಕ್ಟ್ ಸಂಬಂಧ್ ಅಡಿಯಲ್ಲಿ ಇವುಗಳನ್ನು ಸರಿಪಡಿಸಲಾಗಿದೆ. ತನ್ನ ಹೆಸರನ್ನು ಬಹಿರಂಗಪಡಿಸಲು ಬಯಸದ 70 ವರ್ಷದ ಮಹಿಳೆ ತಮ್ಮ ಪತಿಯ ಬಾಕಿ ಹಣ 1 ಕೋಟಿ ರೂಪಾಯಿಗಳನ್ನು ಈಗ ಪಡೆದುಕೊಳ್ಳಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read