GOOD NEWS : ಪ್ರಸಕ್ತ ವರ್ಷದ ಸರ್ಕಾರಿ ಕೋಟಾದಲ್ಲಿ 422 ವೈದ್ಯಕೀಯ ಸೀಟು ಹೆಚ್ಚಳ : ಸಚಿವ ಶರಣ ಪ್ರಕಾಶ್ ಪಾಟೀಲ್


ಬೆಂಗಳೂರು : ಪ್ರಸಕ್ತ ವರ್ಷದ ಸರ್ಕಾರಿ ಕೋಟಾದಲ್ಲಿ 422 ವೈದ್ಯಕೀಯ ಸೀಟು ಹೆಚ್ಚಳ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರಸಕ್ತ ವರ್ಷದ ಸರ್ಕಾರಿ ಕೋಟಾದಲ್ಲಿ 422 ವೈದ್ಯಕೀಯ ಸೀಟು ಹೆಚ್ಚಳ ಮಾಡಲಾಗಿದೆ . . ಪ್ರಸಕ್ತ ವರ್ಷದಲ್ಲೇ ಕೆಇಎ ಸೀಟ್ ಗೆ ಅಳವಡಿಸಿಕೊಳ್ಲಲು ಸೂಚನೆ ನೀಡಲಾಗಿದೆ.

1,100 ಖಾಸಗಿ ಮೆಡಿಕಲ್ ಸೀಟ್ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 12,395 ಸರ್ಕಾರಿ ಕೋಟಾ ಇತ್ತು. ಈ ಮೂಲಕ ಒಟ್ಟು 13945 ಸರ್ಕಾರಿ ಕೋಟಾಗೆ ಏರಿಕೆಯಾಗಿದೆ. ಈ ವರ್ಷದಲ್ಲಿ ಪಿಜಿ ಮೆಡಿಕಲ್ ಸೀಟ್ ಗಳಿಗೆ ತುಂಬಾ ಬೇಡಿಕೆ ಇತ್ತು. ಸರ್ಕಾರಿ ಕೋಟಾದಡಿ ಹೆಚ್ಚುವರಿಯಾಗಿ 572 ಪಿಜಿ ಸೀಟ್ ಕೇಳಿದ್ದೆವು. ಈ ಬಾರಿ 422 ಪಿಜಿ ಸೀಟ್ ಸಿಕ್ಕಿರುವ ಮಾಹಿತಿ ಇದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read