ಮೋದಿಯನ್ನು ಲೇವಡಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆ ಮಾಲ್ಡೀವ್ಸ್; ಸಾವಿರಾರು ಭಾರತೀಯರಿಂದ ಪ್ರಯಾಣ ರದ್ದು..!

ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ವಿವಾದ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ಇದರ ಪರಿಣಾಮ ದಿನ ದಿನಕ್ಕೂ ಹೆಚ್ಚುತ್ತಿದೆ. ಭಾರತೀಯರಲ್ಲಿ ದೇಶದ ಬಗ್ಗೆ ಪ್ರೀತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವ ಹೆಚ್ಚಾಗಿದೆ. ಮಾಲ್ಡೀವ್ಸ್ ವಿರುದ್ಧ ಕೋಪ ಸ್ಪಷ್ಟವಾಗ್ತಿದೆ. ಇದೇ ಕಾರಣಕ್ಕೆ ಮಾಲ್ಡೀವ್ಸ್‌ಗೆ ಹೋಗುವ 300 ರಿಂದ 400 ಪ್ರಯಾಣಿಕರು ಪ್ರತಿದಿನ ವಿಮಾನವನ್ನು ರದ್ದು ಮಾಡ್ತಿದ್ದಾರೆ.

ಮಾಲ್ಡೀವ್ಸ್‌, ಭಾರತೀಯರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿಗೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಿದೆ. ಆದ್ರೆ ವಿವಾದದ ನಂತ್ರ ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ರದ್ದು ಮಾಡ್ತಿದ್ದಾರೆ. ಇದು ಮಾಲ್ಡೀವ್ಸ್‌ ಮೇಲೆ ಮಾತ್ರವಲ್ಲ ಇಂಡಿಯನ್ ಏರ್‌ಲೈನ್ಸ್‌ನ ಮೇಲೆಯೂ ಪರಿಣಾಮ ಬೀರುತ್ತಿದೆ.

ಪ್ರತಿ ದಿನ ಮಾಲ್ಡೀವ್ಸ್‌ ಗೆ ಎಂಟು ವಿಮಾನಗಳು ಹಾರಾಟ ನಡೆಸುತ್ತವೆ. ಬೇರೆ ಬೇರೆ ನಗರದಿಂದ ಮಾಲ್ಡೀವ್ಸ್‌ ಗೆ ನೇರ ವಿಮಾನ ಹಾರಾಟ ನಡೆಯುತ್ತದೆ. ಇವುಗಳಲ್ಲಿ 3 ವಿಮಾನಗಳು ಮುಂಬೈನಿಂದ ನೇರವಾಗಿ ಮಾಲ್ಡೀವ್ಸ್‌ಗೆ ಹೋಗುತ್ತವೆ. ಇದಲ್ಲದೆ, ಹೈದರಾಬಾದ್, ಕೊಚ್ಚಿ, ಬೆಂಗಳೂರು ಮತ್ತು ದೆಹಲಿಯಿಂದ ಮಾಲ್ಡೀವ್ಸ್‌ಗೆ ನೇರ ವಿಮಾನ ಸೌಲಭ್ಯವಿದೆ.

ಈ ವಿಮಾನದ ಮೂಲಕ ಪ್ರತಿ ದಿನ ಸುಮಾರು 1,200-1,300 ಮಂದಿ ಭಾರತೀಯರು ಮಾಲ್ಡೀವ್ಸ್‌ ಗೆ ಹೋಗ್ತಿದ್ದರು. ಈಗ ಸುಮಾರು ಶೇಕಡಾ 20 ರಿಂದ 30 ರಷ್ಟು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದಾರೆ ಎಂದು ಬ್ಲೂ ಸ್ಟಾರ್ ಏರ್ ಟ್ರಾವೆಲ್ ಸರ್ವಿಸಸ್ ನ ನಿರ್ದೇಶಕ ಮಾಧವ್ ಓಜಾ ಹೇಳಿದ್ದಾರೆ.

ಈ ಮಧ್ಯೆ ಪ್ರಯಾಣ ಬುಕಿಂಗ್ ಅಪ್ಲಿಕೇಶನ್ EaseMyTrip ಮಾಲ್ಡೀವ್ಸ್‌ಗೆ ಪ್ರಯಾಣ ಬುಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಪ್ರಧಾನಿ ಮೋದಿ ಹಾಗೂ ಭಾರತದ ಜೊತೆ ನಾವಿದ್ದೇವೆ ಎಂದಿರುವ EaseMyTrip ಮಾಲೀಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read