400ರ ಗಡಿ ದಾಟುವ ಕನಸಿನಲ್ಲಿದ್ದ ಬಿಜೆಪಿ ಎಡವಿದ್ದೆಲ್ಲಿ?

ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತಕಾರಿಯಾಗಿದೆ. 400ರ ಗಡಿ ದಾಟುವ ಗುರಿ ಇಟ್ಟುಕೊಂಡಿದ್ದ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಬಿಜೆಪಿ ಇಂತಹ ನಿರಾಶಾದಾಯಕ ಫಲಿತಾಂಶ ಪಡೆದಿರುವುದೇಕೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 2024ರ ಲೋಕಸಭಾ ಚುನಾವಣೆಯ ಪ್ರಚಾರದುದ್ದಕ್ಕೂ ಬಿಜೆಪಿ  ಮೋದಿ ಅಲೆಯ ಮೇಲೆ ಸವಾರಿ ಮಾಡುತ್ತಾ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿಯನ್ನು ಬಿಚ್ಚಿಟ್ಟಿತ್ತು. ನೂರಾರು ರ್ಯಾಲಿಗಳನ್ನು ನಡೆಸಿತ್ತು.

ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟ ರೂಪುಗೊಳ್ಳುವ ಮೊದಲೇ ಹಲವಾರು ಹಿನ್ನಡೆಗಳನ್ನು ಅನುಭವಿಸಿತ್ತು. ನಿತೀಶ್‌ ನಿರ್ಗಮನದ ನಂತರ ಮಮತಾ ಬ್ಯಾನರ್ಜಿ ಸಹ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ನಂತರ ಆಟ ಬದಲಾಯಿತು.

ಕೊನೆಯ ಎರಡು ಹಂತದ ಚುನಾವಣೆಗಳು ಸಮೀಪಿಸುತ್ತಿರುವಾಗಲೂ  ರಾಜಕೀಯ ಪಂಡಿತರು ಬಿಜೆಪಿ ಕೂಡ ಪ್ರತಿಪಕ್ಷಗಳ ತಂತ್ರವನ್ನೇ ಅನುಸರಿಸಬೇಕಿತ್ತು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಹಿಂದೂ-ಮುಸ್ಲಿಂ ವಿಷಯಗಳ ಬಗ್ಗೆ ಟೀಕೆ ಕೂಡ ಆ ಸಂದರ್ಭದಲ್ಲಿ ನಡೆಯುತ್ತಲೇ ಇತ್ತು. ಆದರೆ ಇಂಡಿಯಾ ಒಕ್ಕೂಟದ ನಾಯಕರು ಮಾತ್ರ ಚಾರ್‌ ಸೌ ಪಾರ್‌ ಎಂಬ ಬಿಜೆಪಿ ಘೋಷಣೆಯನ್ನು ಗೇಲಿ ಮಾಡುತ್ತಿದ್ದರು. ಆದರೆ ಎಲ್ಲಾ ಪಕ್ಷಗಳ ಹಣೆಬರಹ ಇದ್ದಿದ್ದು ಮಾತ್ರ ಮತದಾರರ ಕೈಯ್ಯಲ್ಲಿ.

ಎನ್‌ಡಿಎ ನಾಯಕರು ಅಭಿವೃದ್ಧಿಯ ವಿಚಾರವನ್ನು ಬದಿಗಿಟ್ಟು ಹಿಂದೂ-ಮುಸ್ಲಿಂ, ಮುಸ್ಲಿಂ ಮೀಸಲಾತಿ ಇವುಗಳನ್ನು ಹೈಲೈಟ್‌ ಮಾಡಿದ್ದು ಕೂಡ ಹಿನ್ನಡೆಗೆ ಕಾರಣವಾದಂತಿದೆ. ರೈತರ ಚಳವಳಿ, ಮೀಸಲಾತಿ ವಿಚಾರ ಬಿಜೆಪಿಗೆ ಆಘಾತ ಕೊಟ್ಟಿರಬಹುದು. ಇದರ ಜೊತೆಗೆ ಸಂವಿಧಾನ  ಬದಲಾಯಿಸುವ ಬಗ್ಗೆ ಬಿಜೆಪಿ ನಾಯಕರ ಹೇಳಿಗೆ ಕೂಡ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಇವುಗಳನ್ನೆಲ್ಲ ಇಂಡಿಯಾ ಒಕ್ಕೂಟ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಹಣದುಬ್ಬರ ಮತ್ತು ನಿರುದ್ಯೋಗ ಕೂಡ ಕಾಂಗ್ರೆಸ್‌ ಬತ್ತಳಿಕೆಯಲ್ಲಿತ್ತು.

ಮುಸ್ಲಿಂ ಮೀಸಲಾತಿ ವಿಚಾರ ಬಿಜೆಪಿಯ ನಿರಾಶಾದಾಯಕ ಪ್ರದರ್ಶನಕ್ಕೆ ಪರೋಕ್ಷ ಕಾರಣವಾಗಿದೆ. ರಾಜಕೀಯ ತಜ್ಞರ ಪ್ರಕಾರ ರೈತರ ಚಳವಳಿ, ಮೀಸಲಾತಿ ಮತ್ತು ಸಂವಿಧಾನದ ಚರ್ಚೆ, ಸಂವಿಧಾನವನ್ನು ಬದಲಾಯಿಸುವ ಮೂಲಕ ಮೀಸಲಾತಿಯನ್ನು ಕೊನೆಗೊಳಿಸುವ ಮಾತುಗಳು ಇವೆಲ್ಲ ಬಿಜೆಪಿಗೆ ಹಿನ್ನಡೆ ಉಂಟುಮಾಡಿವೆ.

ಚುನಾವಣಾ ಫಲಿತಾಂಶಕ್ಕೂ ಮುನ್ನ ಪ್ರಧಾನಿ ಮೋದಿಯವರ ಧ್ಯಾನ ಮತ್ತು ಯೋಗದ ಬಗ್ಗೆಯೂ ಚರ್ಚೆಯಾಗಿದೆ. ಹಲವು ರಾಜ್ಯಗಳಲ್ಲಿ ಕಡಿಮೆ ಮತದಾನವಾಗಿದೆ. ಇದು ಚುನಾವಣೆ ಬಗ್ಗೆ ಜನರಲ್ಲಿ ಇರುವ ನಿರಾಸಕ್ತಿಗೆ ಸಾಕ್ಷಿ. 400 ಹಾಗಿರಲಿ 300ರ ಅಂಕಿ ದಾಟಲು ಬಿಜೆಪಿ ಪರದಾಡುತ್ತಿದೆ. ಮತ್ತೊಂದೆಡೆ ಫಲಿತಾಂಶದಿಂದ ಸಂತಸಗೊಂಡಿರುವ ಕಾಂಗ್ರೆಸ್‌ ಭವಿಷ್ಯದ ಪ್ಲಾನಿಂಗ್‌ ಶುರು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read