ಕಚೇರಿಯ ಶೌಚಾಲಯದೊಳಕ್ಕೆ ಹೋದ ಉದ್ಯೋಗಿ ಹೃದಯಸ್ತಂಭನ; ಬಾಗಿಲು ತೆಗೆದ ಸಹೋದ್ಯೋಗಿಗಳಿಗೆ ಶಾಕ್……!

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಎಚ್‌ಸಿಎಲ್ ಟೆಕ್ನಾಲಜೀಸ್‌ ಕಂಪನಿ ಕಚೇರಿಯ ಶೌಚಾಲಯದಲ್ಲಿ 40 ವರ್ಷದ ಉದ್ಯೋಗಿಯೊಬ್ಬರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ . ಈ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮೃತರನ್ನು ನಿತಿನ್ ಎಡ್ವಿನ್ ಮೈಕೆಲ್ ಎಂದು ಗುರುತಿಸಲಾಗಿದ್ದು, ಅವರು ಕಂಪನಿಯಲ್ಲಿ ಹಿರಿಯ ವಿಶ್ಲೇಷಕರಾಗಿದ್ದರು .
“ಶುಕ್ರವಾರ ಸಂಜೆ 7 ಗಂಟೆಗೆ, ಮಿಹಾನ್ ಪ್ರದೇಶದಲ್ಲಿನ ಎಚ್‌ಸಿಎಲ್ ಟೆಕ್ನಾಲಜೀಸ್‌ ಕಂಪನಿ ಕಚೇರಿಯ ಶೌಚಾಲಯ ಪ್ರವೇಶಿಸಿದ ನಂತರ ನಿತಿನ್ ಎಡ್ವಿನ್ ಮೈಕೆಲ್ ರವರಿಗೆ ಹೃದಯಸ್ತಂಭನವಾಗಿದೆ” ಎಂದು ಸೋನೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣ ನಿತಿನ್ ಎಡ್ವಿನ್ ಮೈಕೆಲ್ ರನ್ನು ಅವರ ಸಹೋದ್ಯೋಗಿಗಳು ನಾಗ್ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ಕರೆದೊಯ್ದರು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಸೋನೆಗಾಂವ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ಶವಪರೀಕ್ಷೆಯಲ್ಲಿ ಮೈಕೆಲ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೈಕೆಲ್ ಅವರು ಪತ್ನಿ ಮತ್ತು ಆರು ವರ್ಷದ ಮಗನನ್ನು ಅಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read