ಚಿನ್ನಾಭರಣ ಕಳ್ಳತನಕ್ಕಾಗಿ 110 ದಿನದಲ್ಲಿ 200 ವಿಮಾನದಲ್ಲಿ ಪ್ರಯಾಣಿಸಿದ್ದ ಖತರ್ನಾಕ್…!

ವಿಮಾನದಲ್ಲಿನ ಸಹ ಪ್ರಯಾಣಿಕರ ಬೆಲೆಬಾಳುವ ಚಿನ್ನಾಭರಣ ಮತ್ತು ವಸ್ತುಗಳನ್ನು ಕದಿಯಲು 40 ವರ್ಷದ ದೆಹಲಿಯ ವ್ಯಕ್ತಿಯೊಬ್ಬ 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ. ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕಪೂರ್ ಎಂಬಾತ ಕಳೆದ ವರ್ಷದಲ್ಲಿ ಕಳ್ಳತನ ಮಾಡಲು ಕನಿಷ್ಠ 200 ವಿಮಾನಗಳಲ್ಲಿ 110 ದಿನಗಳಿಗಿಂತ ಹೆಚ್ಚು ಕಾಲ ಪ್ರಯಾಣಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಪೊಲೀಸ್ ಉಪ ಕಮಿಷನರ್ (ಐಜಿಐ) ಉಷಾ ರಂಗನಾನಿ ಅವರು ಕಪೂರ್ ನನ್ನು ಪಹರ್‌ಗಂಜ್‌ನಲ್ಲಿ ಕದ್ದ ಆಭರಣ ಸಮೇತ ಬಂಧಿಸಲಾಗಿದೆ ಎಂದು ಹೇಳಿದರು.

ಅವುಗಳನ್ನು ಕರೋಲ್ ಬಾಗ್‌ನಿಂದ ಬಂಧಿಸಲ್ಪಟ್ಟ 46 ವರ್ಷದ ಶರದ್ ಜೈನ್‌ಗೆ ಮಾರಾಟ ಮಾಡಲು ಯೋಜಿಸುತ್ತಿದ್ದ ಎಂದು ತಿಳಿಸಿದರು.

ಕಳೆದ ಮೂರು ತಿಂಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ವರದಿಯಾದ ನಂತರ ಐಜಿಐ ವಿಮಾನ ನಿಲ್ದಾಣದಿಂದ ಅಪರಾಧಿಗಳನ್ನು ಹಿಡಿಯಲು ತಂಡವನ್ನು ರಚಿಸಲಾಯಿತು.

ಏಪ್ರಿಲ್ 11 ರಂದು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದರು. ಫೆಬ್ರವರಿ 2 ರಂದು ಮತ್ತೊಂದು ಕಳ್ಳತನ ವರದಿಯಾಗಿದ್ದು, ಅಮೃತಸರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳೆದುಕೊಂಡಿದ್ದರು.

ತನಿಖೆಯ ಸಂದರ್ಭದಲ್ಲಿ ದೆಹಲಿ ಮತ್ತು ಅಮೃತಸರ ವಿಮಾನ ನಿಲ್ದಾಣಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ವಿಮಾನ ಪ್ರಯಾಣ ವಿವರಗಳನ್ನು ವಿಶ್ಲೇಷಿಸಲಾಗಿತ್ತು. ಕಳ್ಳತನದ ಘಟನೆಗಳು ವರದಿಯಾದ ಎರಡೂ ವಿಮಾನಗಳಲ್ಲಿ ಶಂಕಿತ ಕಾಣಿಸಿಕೊಂಡಿದ್ದರಿಂದ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಅವರು ಹೇಳಿದರು.

ಶಂಕಿತ ಪ್ರಯಾಣಿಕನ ಫೋನ್ ಸಂಖ್ಯೆಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಪಡೆದ ಬಳಿಕ ಬುಕ್ಕಿಂಗ್ ಸಮಯದಲ್ಲಿ ಆತ ನಕಲಿ ಸಂಖ್ಯೆ ನೀಡಿದ್ದ. ತಾಂತ್ರಿಕ ಕಣ್ಗಾವಲು ನಂತರ, ಕಪೂರ್ ನ ಮೂಲ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು ಬಳಿಕ ಆರೋಪಿ ಸಿಕ್ಕಿಬಿದ್ದ ಎಂದು ತಿಳಿಸಿದ್ದಾರೆ.

ನಿರಂತರ ವಿಚಾರಣೆಯಲ್ಲಿ, ಹೈದರಾಬಾದ್‌ನ ಒಂದು ಪ್ರಕರಣ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದ ಹೆಚ್ಚಿನ ಹಣವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಜೂಜಿಗೆ ಖರ್ಚು ಮಾಡಿದ್ದಾನೆ. ಕಪೂರ್ ಕಳ್ಳತನ, ಜೂಜು ಮತ್ತು ಕ್ರಿಮಿನಲ್ ನಂಬಿಕೆಯ 11 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈ ಪೈಕಿ ಐದು ಪ್ರಕರಣಗಳು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದೆ.

ಕಪೂರ್ ದುರ್ಬಲ ಪ್ರಯಾಣಿಕರನ್ನು, ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

“ಅಂತಹ ಪ್ರಯಾಣಿಕರು ತಮ್ಮ ಕೈಚೀಲಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಸಾಗಿಸುವ ಪ್ರವೃತ್ತಿಯನ್ನು ಗುರುತಿಸಿ, ಅವರು ದೆಹಲಿ, ಚಂಡೀಗಢ ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಗೆ ಹೋಗುವ ದೇಶೀಯ ವಿಮಾನಗಳಲ್ಲಿ, ವಿಶೇಷವಾಗಿ ಏರ್ ಇಂಡಿಯಾ ಮತ್ತು ವಿಸ್ತಾರಾದಲ್ಲಿ ಪ್ರಯಾಣಿಸಿದ್ದ” ಎಂದು ಅಧಿಕಾರಿ ಹೇಳಿದರು.

ಹಲವಾರು ಸಂದರ್ಭಗಳಲ್ಲಿ ತಾನು ಗುರಿಯಾಗಿಸಿಟ್ಟುಕೊಂಡ ಪ್ರಯಾಣಿಕರ ಬಳಿ ಕುಳಿತುಕೊಳ್ಳಲು ವಿಮಾನದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದ.
.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read