40 ಉದ್ಯೋಗಿಗಳಿಗೆ 70 ಕೋಟಿ ರೂಪಾಯಿ ಬೋನಸ್‌; ವೇದಿಕೆ ಮೇಲೆ ನೋಟುಗಳ ರಾಶಿ…..!

ಉದ್ಯೋಗಿಗಳಿಗೆ ಪ್ರತಿವರ್ಷ ಹತ್ತಿಪ್ಪತ್ತು ಸಾವಿರ ರೂಪಾಯಿ ಬೋನಸ್‌ ಕೊಡೋದು ಮಾಮೂಲು. ಕೆಲವು ಕಡೆ ಬೆಲೆ ಬಾಳುವ ಉಡುಗೊರೆಗಳನ್ನೂ ಕೊಡುತ್ತಾರೆ. ಆದ್ರೆ ಚೀನಾದ ಕಂಪನಿಯೊಂದು ಉದ್ಯೋಗಿಗಳಿಗೆ ಕೊಟ್ಟಿರೋ ಬೋನಸ್‌ ಎಲ್ಲರಿಗೂ ಆಘಾತ ಉಂಟು ಮಾಡಿದೆ. ಈ ಕಂಪನಿಯಲ್ಲಿರುವ 40 ಉದ್ಯೋಗಿಗಳಿಗೆ ಮಾಲೀಕ  61 ಮಿಲಿಯನ್ ಯುವಾನ್ ಅಂದರೆ ಸುಮಾರು 70 ಕೋಟಿ ರೂಪಾಯಿಗಳ ಬ್ಯಾಂಕ್ ನೋಟುಗಳನ್ನೇ ವಿತರಿಸಿದ್ದಾರೆ. ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಂಪನಿಯ ವಾರ್ಷಿಕ ಪಾರ್ಟಿಯಲ್ಲಿ ವೇದಿಕೆ ಮೇಲೆ ಸುಮಾರು ಎರಡು ಮೀಟರ್ ಎತ್ತರದಲ್ಲಿ ನೋಟುಗಳ ಬಂಡಲ್ ಅನ್ನು ಜೋಡಿಸಿ ಇಡಲಾಗಿತ್ತು. ಪಾರ್ಟಿ ಮುಗಿಯುತ್ತಿದ್ದಂತೆ ಕಂಪನಿಯ ಉದ್ಯೋಗಿಗಳೆಲ್ಲ ನೋಟುಗಳ ಕಟ್ಟುಗಳೊಂದಿಗೆ ಮನೆಗೆ ತೆರಳಿದ್ದಾರೆ. ಮೂವರು ಅತ್ಯುತ್ತಮ ನೌಕರರಿಗೆ 6 ಕೋಟಿ ರೂಪಾಯಿ ಬೋನಸ್‌ ಸಿಕ್ಕಿದೆಯಂತೆ. ಉಳಿದ 30ಕ್ಕೂ ಹೆಚ್ಚು ಮಂದಿಗೆ ತಲಾ 20 ಲಕ್ಷ ರೂಪಾಯಿಗೂ ಅಧಿಕ ಹಣ ದಕ್ಕಿದೆ.

ಈ ವೇಳೆ ನೋಟುಗಳನ್ನು ಎಣಿಸುವ ಸ್ಪರ್ಧೆಯೂ ಇತ್ತು. ಇದಕ್ಕಾಗಿಯೇ ಕಂಪನಿ 12 ಮಿಲಿಯನ್ ಯುವಾನ್ ಹಣವನ್ನು ಖರ್ಚು ಮಾಡಿದೆ. ಹೆನಾನ್ ಮೈನ್ ಹೆಸರಿನ ಕಂಪನಿ ಈ ರೀತಿ ಬಂಪರ್‌ ಬೋನಸ್‌ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಂಪನಿಯ ಆದಾಯ ಕಳೆದ ವರ್ಷಕ್ಕಿಂತ ಶೇ.23ರಷ್ಟು ಹೆಚ್ಚಾಗಿದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read