Shocking: ಶಾಲೆಯಲ್ಲಿ ಚಾಕೊಲೇಟ್ ತಿಂದ ಮಗು ಅಸ್ವಸ್ಥ; ಪರೀಕ್ಷೆಯಲ್ಲಿ ʼಖಿನ್ನತೆ ನಿವಾರಕʼ ಪತ್ತೆ !

ಕೇರಳದ ನಾಲ್ಕು ವರ್ಷದ ಮಗುವೊಂದು ಶಾಲೆಯಲ್ಲಿ ಚಾಕೊಲೇಟ್ ತಿಂದ ನಂತರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮಗುವಿನ ಮೂತ್ರ ಪರೀಕ್ಷೆಯಲ್ಲಿ ʼಖಿನ್ನತೆ ನಿವಾರಕʼ ಅಂಶ ಪತ್ತೆಯಾಗಿದೆ.

ಫೆಬ್ರವರಿ 17 ರಂದು ಈ ಘಟನೆ ನಡೆದಿದ್ದು, ಮಗು ಶಾಲೆಗೆ ಹೋಗಿ ಬಂದ ನಂತರ ತಲೆಸುತ್ತು ಬಂದು ಅಸ್ವಸ್ಥನಾಗಿದ್ದಾನೆ. ತಾಯಿ ವಿಚಾರಿಸಿದಾಗ, ಮಗು ಶಾಲೆಯಲ್ಲಿ ಚಾಕೊಲೇಟ್ ತಿಂದಿರುವುದಾಗಿ ಶಿಕ್ಷಕರು ತಿಳಿಸಿದ್ದಾರೆ. ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಎರ್ನಾಕುಲಂನ ಅಮೃತ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಮೃತ ಆಸ್ಪತ್ರೆಯಲ್ಲಿ ನಡೆಸಿದ ಮೂತ್ರ ಪರೀಕ್ಷೆಯಲ್ಲಿ ಬೆಂಜೊಡಿಯಜೆಪೈನ್ಸ್ ಎಂಬ ಖಿನ್ನತೆ ನಿವಾರಕ ಅಂಶ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿಗೆ ಚಾಕೊಲೇಟ್ ಎಲ್ಲಿಂದ ಬಂತು ಅಥವಾ ಬೆಂಜೊಡಿಯಜೆಪೈನ್ಸ್ ಹೇಗೆ ಮಗುವಿನ ದೇಹವನ್ನು ಸೇರಿಕೊಂಡಿತು ಎಂಬುದು ತಿಳಿದುಬಂದಿಲ್ಲ. ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಗು ಚಾಕೊಲೇಟ್ ತಿಂದ ನಂತರ ತಲೆಸುತ್ತು ಬಂದಿದೆ ಎಂದು ಮಗುವಿನ ಕುಟುಂಬದವರು ಆರೋಪಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಮಗುವಿನ ಬಗ್ಗೆ ಅಮೃತ ಆಸ್ಪತ್ರೆಯಿಂದ ಮಾಹಿತಿ ಪಡೆದ ನಂತರ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆದರೆ, ಮಗು ಓದುತ್ತಿದ್ದ ಖಾಸಗಿ ಶಾಲೆಯ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಮಗು ಅಜ್ಜಿಯೊಂದಿಗೆ ಮನೆಗೆ ಹೋಗುವವರೆಗೂ ಚೆನ್ನಾಗಿಯೇ ಇದ್ದ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಮತ್ತೊಂದು ಮಗು ಕೂಡ ಚಾಕೊಲೇಟ್ ತಿಂದಿದ್ದು, ಆ ಮಗುವಿಗೆ ಏನೂ ಆಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಮಗುವಿಗೆ ಅಧಿಕ ರಕ್ತದೊತ್ತಡ ಇದ್ದ ಕಾರಣ ಕೆಲವು ದಿನಗಳ ಕಾಲ ಐಸಿಯುನಲ್ಲಿ ಇರಿಸಲಾಗಿತ್ತು. ಪ್ರಯೋಗಾಲಯ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ. ಮಗು ಆರಂಭದಲ್ಲಿ ತಾಯಿಯೇ ಚಾಕೊಲೇಟ್ ನೀಡಿದ್ದಾಗಿ ಹೇಳಿತ್ತು. ಆದರೆ, ತಾಯಿ ಅದನ್ನು ನಿರಾಕರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read