ಬೆಂಗಳೂರು : ಬಿಎಂಟಿಸಿ (BMTC) ಬಸ್ ಹರಿದು ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.
4 ವರ್ಷದ ಬಾಲಕಿ ಪೂರ್ವಿ ಮೃತಪಟ್ಟಿದ್ದು, ಮಗಳನ್ನು ಶಾಲೆಗೆ ಬಿಡಲು ತಂದೆ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಬೈಕ್ ಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಹಾಗೂ ಮಗಳು ಪೂರ್ವಿ ರಸ್ತೆಗೆ ಬಿದ್ದಿದ್ದು ಇದೇ ವೇಳೆ ಬಸ್ ಹರಿದು ಬಾಲಕಿ ಪೂರ್ವಿ ಮೃತಪಟ್ಟಿದ್ದಾಳೆ. ತಂದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ