ಕೊರಿಯನ್ ಗ್ಲಾಸ್ ಸ್ಕಿನ್ (Korean Glass Skin) ಪಡೆಯುವ ಆಸೆ ನಿಮಗೂ ಇದೆಯೇ ? ಈ ಹೊಳೆಯುವ ಚರ್ಮದ ಟ್ರೆಂಡ್ (Trend) ಇಂದು ಎಲ್ಲರ ಗಮನ ಸೆಳೆದಿದೆ. ಆದರೆ ಇದನ್ನು ಪಡೆಯಲು ಕೇವಲ ಆಸೆ ಇದ್ದರೆ ಸಾಲದು, ಕ್ರಮಬದ್ಧವಾದ ಚರ್ಮದ ಆರೈಕೆ ಮತ್ತು ನಿರಂತರ ಪ್ರಯತ್ನ ಮುಖ್ಯ. ನಿಮಗಾಗಿ ಮನೆಯಲ್ಲೇ ತಯಾರಿಸಬಹುದಾದ ಮತ್ತು ಕೊರಿಯನ್ ಗ್ಲಾಸ್ ಸ್ಕಿನ್ ಪಡೆಯಲು ಸಹಾಯ ಮಾಡುವ 4 ಪರಿಣಾಮಕಾರಿ ಫೇಸ್ ಪ್ಯಾಕ್ಗಳ (Face Packs) ಮಾಹಿತಿ ಇಲ್ಲಿದೆ.
- ಅಕ್ಕಿ ನೀರಿನ ಫೇಸ್ ಪ್ಯಾಕ್: ಕೊರಿಯನ್ ಸೌಂದರ್ಯದ ರಹಸ್ಯಗಳಲ್ಲಿ ಅಕ್ಕಿ ನೀರು ಪ್ರಮುಖವಾದದ್ದು. ಹಸಿ ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಟ್ಟು ಮರುದಿನ ಆ ನೀರನ್ನು ಬಳಸಬಹುದು. ಸಂಶೋಧನೆಗಳ ಪ್ರಕಾರ ಅಕ್ಕಿ ನೀರು ವಯಸ್ಸಾಗುವಿಕೆಯನ್ನು ತಡೆಯುವ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅಕ್ಕಿ ನೀರಿಗೆ ಸ್ವಲ್ಪ ಗ್ರೀನ್ ಟೀ (Green Tea) ಸೇರಿಸಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
- ಜೇನುತುಪ್ಪ, ಮೊಸರು ಮತ್ತು ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್: ಎರಡು ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಓಟ್ಮೀಲ್ ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್: ಓಟ್ಮೀಲ್ ಚರ್ಮವನ್ನು ನೈಸರ್ಗಿಕವಾಗಿ ಎಕ್ಸ್ಫೋಲಿಯೇಟ್ (Exfoliate) ಮಾಡುತ್ತದೆ ಮತ್ತು ಬಾಳೆಹಣ್ಣು ಪೋಷಣೆ ನೀಡುತ್ತದೆ. ಈ ಎರಡನ್ನೂ ಸೇರಿಸಿ ಮಾಡಿದ ಫೇಸ್ ಪ್ಯಾಕ್ ಚರ್ಮವನ್ನು ಶುದ್ಧಗೊಳಿಸಿ ಹೊಳಪು ನೀಡುತ್ತದೆ. ಎರಡು ಚಮಚ ಓಟ್ಮೀಲ್ಗೆ ಅರ್ಧ ಮಾಗಿದ ಬಾಳೆಹಣ್ಣನ್ನು ಕಿವುಚಿ ದಪ್ಪ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 20-30 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಅಕ್ಕಿ ಹಿಟ್ಟು ಮತ್ತು ಕಾಫಿ ಫೇಸ್ ಪ್ಯಾಕ್: ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮದ ಟ್ಯಾನಿಂಗ್ (Tanning) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಅಕ್ಕಿ ಹಿಟ್ಟಿಗೆ ಎರಡು ಚಮಚ ಕಾಫಿ ಪುಡಿ ಮತ್ತು ಕೆಲವು ಹನಿ ಗುಲಾಬಿ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ನೆನಪಿಡಿ: ಯಾವುದೇ ಫೇಸ್ ಪ್ಯಾಕ್ ಬಳಸುವ ಮೊದಲು ನಿಮ್ಮ ಚರ್ಮದ ಒಂದು ಸಣ್ಣ ಭಾಗದಲ್ಲಿ (Patch Test) ಪರೀಕ್ಷಿಸಿ ನೋಡಿ.