ಮಂತ್ರಾಲಯ ಮಠದಲ್ಲಿ ಆಗಸ್ಟ್ 8 ರಿಂದ 14ರ ವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಆಗಸ್ಟ್ 8ರಿಂದ ಒಂದು ವಾರ ಪ್ರತಿದಿನ ಬೆಳಿಗ್ಗೆ ಧಾರ್ಮಿಕ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 8ರಂದು ಸಂಜೆ 6 ಗಂಟೆಗೆ ದ್ವಜಾರೋಹಣದೊಂದಿಗೆ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಆಗಸ್ಟ್ 9ರಂದು ಬೆಳಿಗ್ಗೆ 8:15ಕ್ಕೆ ದೇವಸ್ಥಾನದ ಅಧಿಕಾರಿಗಳು ಶ್ರೀನಿವಾಸ ದೇವರ ವಸ್ತ್ರ ಸಮರ್ಪಿಸಲಿದ್ದಾರೆ. ರಾತ್ರಿ 8 ಗಂಟೆಗೆ ಶಾಖೋತ್ಸವ ರಜತ ಮಂಟಪೋತ್ಸವ ನಡೆಯಲಿದೆ.
ಆಗಸ್ಟ್ 10 ರಂದು ಪೂರ್ವ ಆರಾಧನೆ, ಆಗಸ್ಟ್ 11ರಂದು ಮಧ್ಯಾರಾಧನೆ, ಆಗಸ್ಟ್ 12ರಂದು ಉತ್ತರ ಆರಾಧನೆ ನಡೆಯಲಿದೆ. ಆಗಸ್ಟ್ 12ರಂದು ಮೂಲ ಬೃಂದಾವನಕ್ಕೆ ವಜ್ರ ಕವಚ ಸಮರ್ಪಣೆ, ಮಹಾರಥೋತ್ಸವ ನಡೆಯಲಿದೆ. ಆಗಸ್ಟ್ 13ರಂದು ಅಶ್ವ ವಾಹನೋತ್ಸವ, ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆ. ಆಗಸ್ಟ್ 14ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
TAGGED:ಮಂತ್ರಾಲಯ