3457 ಸರ್ಕಾರಿ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ಆಯೋಗದಿಂದ ಮಹತ್ವದ ಶಿಫಾರಸ್ಸು

ಶಾಲಾ ಮಕ್ಕಳ ಡ್ರಾಪ್ ಔಟ್ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ, ಸರ್ಕಾರಕ್ಕೆ ಮಹತ್ವದ ಶಿಫಾರಸ್ಸು ಮಾಡಿದೆ. 100 ಮೀಟರ್ ಅಂತರದಲ್ಲಿರುವ 3,457 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು 1,667 ಹಿರಿಯ ಪ್ರಾಥಮಿಕ ಶಾಲೆಗಳ ಜೊತೆ ವಿಲೀನಗೊಳಿಸಬಹುದು ಎಂದು ತಿಳಿಸಲಾಗಿದೆ.

ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯ ಭಾಸ್ಕರ್, ಶುಕ್ರವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತಂತೆ ವರದಿ ಸಲ್ಲಿಸಿದ್ದು, ಇದರ ಜೊತೆಗೆ 100 ಮೀಟರ್ ಅಂತರದಲ್ಲಿರುವ 2,460 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳನ್ನು 1,135 ಸಂಯುಕ್ತ/ಕ್ಲಸ್ಟರ್ ಪ್ರೌಢ ಶಾಲೆಗಳನ್ನಾಗಿ ಅಥವಾ ಕರ್ನಾಟಕ ಪಬ್ಲಿಕ್ ಸ್ಕೂಲ್ ಜೊತೆ ವಿಲೀನಗೊಳಿಸಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.

ಅಲ್ಲದೆ 879 ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ವಿಲೀನಗೊಳಿಸಬಹುದು ಎಂದು ಶಿಫಾರಸ್ಸು ಮಾಡುವುದರ ಜೊತೆಗೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6,307 ಅಂಗನವಾಡಿ ಕೇಂದ್ರಗಳನ್ನು ಮುನ್ನೂರು ಮೀಟರ್ ಹಂತದಲ್ಲಿರುವ ಸರ್ಕಾರಿ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಎಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read