ಬೆಂಗಳೂರು : ಕೊಟ್ರೇಶಿ ಕನಸು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 1994 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ವಿಜಯ್ ರಾಘವೇಂದ್ರ ಮತ್ತು ಕರಿಬಸವಯ್ಯ ಸೇರಿ ಹಲವರು ನಟಿಸಿದ್ದ ಸಿನಿಮಾ ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು.
ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡ ಈ ಸಿನಿಮಾಗೆ ಇಂದಿಗೆ 31 ವರ್ಷದ ಸಂಭ್ರಮ. ಈ ಹಿನ್ನೆಲೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಚಿತ್ರದ ಹಲವು ವೈಶಿಷ್ಟ್ಯಗಳನ್ನು ನಿಮ್ಮೊಂದಿಗೆ ನೆನೆದು ಬಾಯಿಚಪ್ಪರಿಸಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
೧) ಬಾಬಾ ಸಾಹೇಬರ ಜನ್ಮದಿನಾಚರಣೆಯಂದು ಮುವ್ವತ್ತು ವರ್ಷಗಳ ಹಿಂದೆ ೧೪-೦೪-೧೯೯೪ ರಂದು ಮೇನಕಾ ಮತ್ತಿತರ ಚಿತ್ರಮಂದಿರಗಳಲ್ಲಿ ಬಿಡುಗಡೆ.
೨)ಖ್ಯಾತ ಲೇಖಕ, ಹಿರಿಯ ಮಿತ್ರ, ಕುಂವೀ ಬರೆದ ದಲಿತ ಬಾಲಕನ ಅಕ್ಷರ ಹಂಬಲದ ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ನೀಳ್ಗತೆ ಆಧಾರಿತ.
೩) ಖ್ಯಾತ ಸಂಗೀತ ನಿರ್ದೇಶಕ ಅಶ್ವತ್ಥ್ , ಖ್ಯಾತ ಕವಿ ಹೆಚ್ಚೆಸ್ವಿ ಅವರ ಸಮಾಗಮ.
೪) ಕರಿಬಸವಯ್ಯ-ಉಮಾಶ್ರೀ ಮನೋಜ್ಞ ಅಭಿನಯ.
೫)ರಾಘುಗೆ ಶ್ರೇಷ್ಠ ಬಾಲನಟ ರಾಷ್ಟ್ರಪ್ರಶಸ್ತಿ
೬) ಗೆಳೆಯ ಮುದ್ದುಕೃಷ್ಣರಿಂದ ಪರಿಚಯವಾದ ನಿರ್ಮಾಪಕ ನಂದಕುಮಾರ್ ಗೆ ರಾಷ್ಟ್ರಪ್ರಶಸ್ತಿ.
೭)ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಖ್ಯಾತ ಛಾಯಾಗ್ರಹಕ ಸನ್ನಿ ಜೋಸೆಫ್ ಪರಿಚಯ.
೮)ಖ್ಯಾತ ನಟ ವಿಷ್ಣುವರ್ಧನ್ ಅತಿಥಿ ಕಲಾವಿದರಾಗಿ ಅಭಿನಯ.
೭)ವಿಶ್ವದ ಹಲವು ಚಿತ್ರ ಉತ್ಸವಗಳಲ್ಲಿ , ವಿವಿಗಳಲ್ಲಿ ಮತ್ತು ಅಮೆರಿಕಾದ ಕನ್ನಡ ಸಂಘಗಳಲ್ಲಿ ವ್ಯಾಪಕ ಪ್ರದರ್ಶನ.
೮)ನನಗೆ ಪ್ರಥಮ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ.
…ಒಂದು ಚಿತ್ರದಿಂದ ಇನ್ನೆಷ್ಟು ಬೇಕು? ಸರ್ವರಿಗೂ ಶರಣು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.