SHOCKING : ಆಟವಾಡುತ್ತಿದ್ದ 3 ವರ್ಷದ  ಬಾಲಕಿ ಮೇಲೆ  ಆಟೋರಿಕ್ಷಾ ಹರಿದು ಸ್ಥಳದಲ್ಲೇ ಸಾವು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ತಮಿಳುನಾಡು : ತಮಿಳುನಾಡಿನಲ್ಲಿ ನಡೆದ ಅಪಘಾತವೊಂದು ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಆಟವಾಡುತ್ತಿದ್ದ 3 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಟೋ ಹರಿದು ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಆಟೋರಿಕ್ಷಾವೊಂದು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸಾವನ್ನಪ್ಪಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಪಟ್ಟಣದ ಹೃದಯಭಾಗದಲ್ಲಿರುವ ಚಿನ್ನ ಕಡೈ ಬೀದಿಯಲ್ಲಿರುವ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಿರಿದಾದ ದಾರಿಗೆ ಆಟೋರಿಕ್ಷಾ ಪ್ರವೇಶಿಸುವುದನ್ನು ವೀಡಿಯೊ ತೋರಿಸುತ್ತದೆ . ಈ ವೇಳೆ 3 ವರ್ಷದ ಮಗುವೊಂದು ಮನೆಯ ಹೊರಗೆ ಆಟವಾಡುತ್ತಾ ರಸ್ತೆಗೆ ಬರುತ್ತದೆ.

ಆಟೋ ಚಾಲಕನು ಚಿಕ್ಕ ಮಗುವನ್ನು ಗಮನಿಸಲಿಲ್ಲ, ಮಗುವಿನ ಮೇಲೆ ಆಟೋದ ಚಕ್ರ ಹರಿಯುತ್ತದೆ. ವಾಹನದ ಹಿಂದಿನ ಚಕ್ರ ಮಗುವಿನ ಮೇಲೆ ಹರಿದಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸ್ಥಳದಲ್ಲಿದ್ದ ಜನರು ಆಘಾತದಿಂದ ಕಿರುಚುತ್ತಾ ಮಗುವಿನ ಕಡೆಗೆ ಧಾವಿಸುತ್ತಾರೆ. ಆಟೋ ಚಾಲಕ ಕೂಡ ತನ್ನ ಆಟೋದಿಂದ ಇಳಿದು ಮಗುವಿಗೆ ಸಹಾಯ ಮಾಡಲು ಧಾವಿಸುತ್ತಾರೆ.

ಅಪಘಾತದಲ್ಲಿ ಅಪ್ರಾಪ್ತ ಬಾಲಕಿಗೆ ಗಂಭೀರ ಗಾಯಗಳಾಗುತ್ತದೆ ನಂತರ ಆಕೆಯ ಸಂಬಂಧಿಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಅಪಘಾತದ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ವರದಿಗಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read