ಶಿವರಾತ್ರಿ ದಿನವೇ ಘೋರ ದುರಂತ: ಸ್ನಾನಕ್ಕೆಂದು ನದಿಗಿಳಿದ ಮೂವರು ವಿದ್ಯಾರ್ಥಿಗಳು ಸಾವು

ಬದೌನ್: ಉತ್ತರ ಪ್ರದೇಶದ ಕಛ್ಲಾ ಗಂಗಾ ಘಾಟ್‌ ನಲ್ಲಿ ಸ್ನಾನ ಮಾಡುತ್ತಿದ್ದಾಗ 3 ಎಂಬಿಬಿಎಸ್ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವುಕಂಡಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿನ ದುರದೃಷ್ಟಕರ ಘಟನೆಯೊಂದರಲ್ಲಿ ಮೂವರು ವಿದ್ಯಾರ್ಥಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಆಳವಾದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಐದು ವಿದ್ಯಾರ್ಥಿಗಳ ತಂಡ ಸ್ನಾನಕ್ಕೆ ತೆರಳಿದ್ದು, ಇಬ್ಬರನ್ನು ಸ್ಥಳೀಯ ಮುಳುಗುಗಾರರು ರಕ್ಷಿಸಿದ್ದಾರೆ.

ಪೊಲೀಸರ ಪ್ರಕಾರ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳ ಗುಂಪು ಶನಿವಾರ ಮಧ್ಯಾಹ್ನ ಕಛ್ಲಾ ಗಂಗಾ ಘಾಟ್‌ ನಲ್ಲಿ ಸ್ನಾನ ಮಾಡಲು ಹೋಗಿ ಆಳವಾದ ನೀರಿನಲ್ಲಿ ಮುಳುಗಿತ್ತು. ಅವರು 22 ರಿಂದ 26 ವರ್ಷ ವಯಸ್ಸಿನವರಾಗಿದ್ದಾರೆ.

ಕಾಲೇಜು ಪ್ರಾಂಶುಪಾಲ ಡಾ.ಧರ್ಮೇಂದ್ರ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳನ್ನು ಜೈ ಮೌರ್ಯ, ಪವನ್ ಪ್ರಕಾಶ್, ನವೀನ್ ಸೆಂಗರ್, ಪ್ರಮೋದ್ ಯಾದವ್, ಅಂಕುಶ್ ಗೆಹ್ಲೋಟ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಕಾಲೇಜು ಆಡಳಿತಕ್ಕೆ ತಿಳಿಸದೆ ಸ್ನಾನ ಮಾಡಲು ಹೋಗಿದ್ದರು ಎಂದು ಹೇಳಿದರು.

ಬದೌನ್  ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್, ಎಸ್‌ಎಸ್‌ಪಿ ಸ್ಥಳದಲ್ಲಿದ್ದಾರೆ ಮತ್ತು ಕಾಣೆಯಾದ ಮೂವರು ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read