29ನೇ ವಯಸ್ಸಿಗೇ ಮೂರು ಕೋಟಿ ರೂ. ಉಳಿತಾಯ ಮಾಡಿದ ಎಂಜಿನಿಯರ್​

ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿರುವ ಯುಗದಲ್ಲಿ, ಉಳಿತಾಯವು ಯುವಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ನಿಮ್ಮ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಮೂಲಕ ಉಳಿತಾಯವು ನಿಮ್ಮನ್ನು ಸಬಲರನ್ನಾಗಿ ಮಾಡುತ್ತದೆ.

ಅಮೆರಿಕದ ಟ್ಯಾನರ್ ಫಿರ್ಲ್ ಎಂಬ ವ್ಯಕ್ತಿ ತನ್ನ 29 ನೇ ವಯಸ್ಸಿಗೆ 3 ಕೋಟಿ ರೂ. ($3,80,000) ಗಿಂತ ಹೆಚ್ಚು ಉಳಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದಾನೆ. ಹಣ ಇಲ್ಲದೇ ಜನರು ಕಷ್ಟಪಡುತ್ತಿರುವಾಗ ಇಷ್ಟು ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಈತ ಮತ್ತು ಪತ್ನಿ ಚಿಂತಿಸುತ್ತಿದ್ದಾರಂತೆ!

ಟ್ಯಾನರ್ ಫಿರ್ಲ್ ಮಿನ್ನಿಯಾಪೋಲಿಸ್‌ನಲ್ಲಿ ವಾಸಿಸುತ್ತಿದ್ದು, ತಮ್ಮ ಅಗತ್ಯಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಹಣವನ್ನು ಖರ್ಚು ಮಾಡದಿರುವುದಕ್ಕೆ ಇಷ್ಟೆಲ್ಲಾ ಉಳಿಸಲು ಸಾಧ್ಯವಾಯಿತು ಎಂದಿದ್ದಾನೆ.

ಪ್ರಸ್ತುತ, ಟ್ಯಾನರ್ ಕುಟುಂಬದಲ್ಲಿ ಆತ, ಹೆಂಡತಿ ಮತ್ತು ಅವನ 1 ವರ್ಷದ ಮಗ ಟೆಡ್ಡಿ ಬಿಟ್ಟರೆ ಮೂರು ಬೆಕ್ಕುಗಳಿವೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವರ್ಷಕ್ಕೆ $1,35,000 (ರೂ. 1 ಕೋಟಿಗಿಂತ ಹೆಚ್ಚು) ಗಳಿಸುತ್ತಾನೆ ಟ್ಯಾನರ್​. ಸದ್ಯ 35 ವರ್ಷಕ್ಕೆ ನಿವೃತ್ತರಾಗುವ ಯೋಚನೆ ಮಾಡಿದ್ದಾನೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read