28 ಕೆಜಿ ತೂಕ ಇಳಿಸಿದ್ದಾಳೆ ನಟಿ ಪರಿಣಿತಿ ಛೋಪ್ರಾ, ಈ ಟಿಪ್ಸ್‌ ಅನುಸರಿಸಿದ್ರೆ ನೀವೂ ಆಗಬಹುದು ಫಿಟ್‌……!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಎಂಗೇಜ್ಮೆಂಟ್‌ನಲ್ಲಿ ಪರಿಣಿತಿ ಸಿಂಪಲ್‌ ಲುಕ್‌ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಪರಿಣಿತಿ ಹೀಗಿರಲಿಲ್ಲ. ಅತಿಯಾದ ತೂಕವೇ ಪರಿಣಿತಿ ಯಶಸ್ಸಿಗೆ ಅಡ್ಡಿಯಾಗಿತ್ತು. ಸಿನೆಮಾಗಳಲ್ಲಿ ಚಾನ್ಸ್‌ ಮಿಸ್ಸಾಗುತ್ತಿತ್ತು. ಬಾಲಿವುಡ್‌ನಲ್ಲಿ ಸಕ್ಸಸ್‌ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಪರಿಣಿತಿ 28 ಕೆಜಿ ತೂಕ ಇಳಿಸಿದ್ರು. ಅದಾದ್ಮೇಲೆ ಪರಿಣಿತಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದವು. ಪರಿಣಿತಿ ತೂಕ ಇಳಿಸಿದ್ಹೇಗೆ? ಅವರ ಜೀವನ ಶೈಲಿ ಹೇಗಿತ್ತು ಅನ್ನೋದನ್ನು ನೋಡೋಣ.

ಕಟ್ಟುನಿಟ್ಟಾದ ಆಹಾರ: ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳದೆ ಫಿಟ್‌ನೆಸ್ ಸಾಧಿಸಲು ಸಾಧ್ಯವಿಲ್ಲ. ಪರಿಣಿತಿ ಚೋಪ್ರಾ ತುಂಬಾ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಹೆಚ್ಚಿನ ಕೊಬ್ಬು, ಹೆಚ್ಚಿನ ಕಾರ್ಬೋಹೈಡ್ರೇಟ್ಗಳು ಮತ್ತು ಸಿಹಿ ಪದಾರ್ಥಗಳಿಂದ ದೂರವಿರುತ್ತಿದ್ದರು. ವಿಶೇಷವಾಗಿ ಪಿಜ್ಜಾ, ಬರ್ಗರ್ ಮತ್ತು ಫ್ರೆಂಚ್ ಫ್ರೈಗಳನ್ನು ತಿನ್ನುತ್ತಿರಲಿಲ್ಲ.

ಆರೋಗ್ಯಕರ ಉಪಹಾರ: ಪರಿಣಿತಿ ಚೋಪ್ರಾ ಬೆಳಗಿನ ಉಪಾಹಾರಕ್ಕೆ ಬ್ರೌನ್ ಬ್ರೆಡ್, ಬೆಣ್ಣೆ, ಮೊಟ್ಟೆಯ ಬಿಳಿಭಾಗ, ಒಂದು ಲೋಟ ಹಾಲು ಮತ್ತು ತಾಜಾ ಹಣ್ಣಿನ ರಸವನ್ನು ಸೇವಿಸುತ್ತಿದ್ದರು. ಆರೋಗ್ಯಕರ ಉಪಹಾರವು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

ಆರೋಗ್ಯಕರ ಊಟ: ಪರಿಣಿತಿ ಚೋಪ್ರಾ ಮಧ್ಯಾಹ್ನದ ಊಟಕ್ಕೆ ಬ್ರೌನ್‌ ರೈಸ್‌, ರೊಟ್ಟಿ, ದಾಲ್ ಮತ್ತು ಸೊಪ್ಪು ತರಕಾರಿಗಳನ್ನು ಸೇವಿಸ್ತಾರೆ. ತೂಕ ನಷ್ಟಕ್ಕೆ ಲಘು ಆಹಾರವು ತುಂಬಾ ಪರಿಣಾಮಕಾರಿ.

ಆರೋಗ್ಯಕರ ಭೋಜನ: ಪರಿಣಿತಿ ಚೋಪ್ರಾ ರಾತ್ರಿ ಮಲಗುವ ಸುಮಾರು 2 ಗಂಟೆಗಳ ಮೊದಲು ಊಟ ಮಾಡುತ್ತಿದ್ದರು. ಕಡಿಮೆ ಎಣ್ಣೆಯಲ್ಲಿ ಮಾಡಿದ ಆಹಾರ, ಹಸಿರು ತರಕಾರಿಗಳು ಮತ್ತು ಒಂದು ಲೋಟ ಹಾಲು ಇದರಲ್ಲಿ ಸೇರಿದೆ.

ನಿಯಮಿತ ವ್ಯಾಯಾಮ: ಆಹಾರ ನಿಯಂತ್ರಣದ ಹೊರತಾಗಿ ಪರಿಣಿತಿ ವ್ಯಾಯಾಮದ ಮೇಲೂ ಹೆಚ್ಚು ಗಮನ ಹರಿಸುತ್ತಾರೆ. ನಿಯಮಿತವಾಗಿ ಜಿಮ್‌ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವರ್ಕೌಟ್ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಾರೆ. ಪರಿಣಿತಿಗೆ ತೂಕ ಕಡಿಮೆ ಮಾಡಿಕೊಳ್ಳಲು ಯೋಗ ಮತ್ತು ಧ್ಯಾನ ಕೂಡ ಸಹಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read