ಪತಿಯೊಂದಿಗೆ ಜಗಳವಾಡಿ, 3ನೇ ಮಹಡಿಯಿಂದ ಮಹಿಳೆಯೊಬ್ಬಳು ಕೆಳಗೆ ಜಿಗಿದು ಪ್ರಾಣ ಬಿಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 27 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸಿಂಗಾಪುರ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ಕೆಳಗೆ ಜಿಗಿಯುವ ವಿಡಿಯೋ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸೀರೆಯುಟ್ಟ ಮಹಿಳೆ ಮಹಡಿ ಹಂಚಿನಲ್ಲಿರುವುದನ್ನು ನೋಡ್ಬಹುದು. ಹಿಂದಿನಿಂದ ಬಂದ ವ್ಯಕ್ತಿ ಆಕೆಯನ್ನು ತಡೆಯುವ ಪ್ರಯತ್ನ ಮಾಡ್ತಾನೆ. ಆದ್ರೆ ಮಹಿಳೆ ಆ ಕ್ಷಣ ಕೆಳಗೆ ಜಿಗಿಯುತ್ತಾಳೆ.
ಪೊಲೀಸರ ಪ್ರಕಾರ, ಮೃತಳನ್ನು ಇಡಬ್ಲ್ಯೂಎಸ್ ಕ್ವಾರ್ಟರ್ ನಿವಾಸಿ ಅಂಗೂರಿ ಬಾಯಿ ಎಂದು ಗುರುತಿಸಲಾಗಿದೆ. ಪತಿ ರಾಹುಲ್ ಲೋಧಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಇಬ್ಬರು ಮಕ್ಕಳು. ಪತಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡ್ತಿದ್ದ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
https://twitter.com/FreePressMP/status/1820361014745166155?ref_src=twsrc%5Etfw%7Ctwcamp%5Etweetembed%7Ctwterm%5E1820361014745166155%7Ctwgr%5Eb58cb5063da9ac49578ad694139b805547fbf0b6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Findore27yearoldwomanjumpsoff3rdfloorafterfightwithhubbydieshorrificvideosurfaces-newsid-n625206513