ಹೈದರಾಬಾದ್‌ನ ಎಲ್‌ಬಿ ನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಕಚೇರಿಯ ಮುಂದೆ ಹೊಸ ಬ್ಯಾನರ್ ಅಳವಡಿಸುತ್ತಿದ್ದಾಗ ಯುವತಿಯೊಬ್ಬಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಯುವತಿ ತನ್ನ ಕಚೇರಿಯ ಮುಂದೆ ಬ್ಯಾನರ್ ಹಿಡಿದಿದ್ದಾಗ ವಿದ್ಯುತ್ ಶಾಕ್ ಗೆ ಒಳಗಾಗಿದ್ದಾಳೆ. ವರದಿಗಳ ಪ್ರಕಾರ, ಖಾಸಗಿ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಚಿಲುಮುಲ ಅರುಣಾ ಮೃತ ಯುವತಿ. ಆಕೆ ಜಗಿತ್ಯಾಲ ಜಿಲ್ಲೆಯ ಕೋರುಟ್ಲಾ ನಿವಾಸಿಯಾಗಿದ್ದರು.
ದುರಂತ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆಕೆಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆಗೆ ಬರುವ ಮುನ್ನವೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ.
https://twitter.com/TeluguScribe/status/1822899139992035819?ref_src=twsrc%5Etfw%7Ctwcamp%5Etweetembed%7Ctwterm%5E1822899139992035819%7Ctwgr%5E602b802311143d3c0998e477ed62148e39cb17f5%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fvideo25yroldwomanelectrocutedwhileinstallingnewofficebannerinhyderabadslbnagar-newsid-n626236471