ಮದ್ಯದ ಅಂಗಡಿಗಳ ಲೈಸೆನ್ಸ್ ನಲ್ಲಿ SC/ST ಗೆ ಶೇ. 25 ರಷ್ಟು ಮೀಸಲು: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು: ಅಬಕಾರಿ ಇಲಾಖೆ ಮದ್ಯದ ಅಂಗಡಿಗಳ ಒಟ್ಟು ಲೈಸೆನ್ಸ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 25ರಷ್ಟು ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಾಮಗಾರಿ, ಸಹಕಾರ ಸೇರಿ ಇತರೆ ಕ್ಷೇತ್ರಗಳಲ್ಲಿ ಈಗಾಗಲೇ ಮೀಸಲಾತಿ ನೀಡಲಾಗಿದೆ. ಅಬಕಾರಿ ಇಲಾಖೆ ಮದ್ಯದ ಅಂಗಡಿಗಳ ಪರವಾನಿಗೆಯಲ್ಲಿಯೂ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾತಿ ನೀಡಿದಲ್ಲಿ ಆ ಸಮುದಾಯಗಳು ಆರ್ಥಿಕ ಸ್ವಾವಲಂಬನೆ ಹೊಂದಲಿವೆ. ಇದನ್ನು ಪರಿಗಣಿಸಬೇಕು ಎಂದು ವರದಿಯಲ್ಲಿ ಕೋರಲಾಗಿದೆ.

ಸಿಎಲ್ 6ಎ,  ಸಿಎಲ್ 4, ಸಿಎಲ್ 7 ಹೊರತುಪಡಿಸಿ ಹೊಸದಾಗಿ ಸಿಎಲ್2 ಡು ಮತ್ತು ಸಿಎಲ್ 9 ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವುದನ್ನು 1992 ರಿಂದ ಅಬಕಾರಿ ಇಲಾಖೆ ನಿಲ್ಲಿಸಿದೆ. ಈ ಹಿಂದೆ ಪರಾವನಿಗೆ ಪಡೆದುಕೊಂಡ ಸಾಕಷ್ಟು ಜನ 30 ವರ್ಷಗಳಿಂದ ಮದ್ಯದ ಅಂಗಡಿ ನಡೆಸುತ್ತಿದ್ದಾರೆ. ಒಬ್ಬೊಬ್ಬರು ಬೇರೆ ಬೇರೆ ಹೆಸರಲ್ಲಿ ಹತ್ತಾರು ಅಂಗಡಿ ನಡೆಸುತ್ತಿದ್ದು, ಕೋಟಾ ಬಾಕಿ ಉಳಿದಿರುವ ಲೈಸೆನ್ಸ್ ಗಳು ಮತ್ತು ಸಿಎಲ್7 ಲೈಸೆನ್ಸ್ ಮಂಜೂರಾತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಕೋರಲಾಗಿದೆ.

ಪರವಾನಿಗೆ ಪಡೆದು ಮದ್ಯದಂಗಡಿ ತೆರೆದ ಆ ವೈನ್ ಶಾಪ್ ಅಥವಾ ಬಾರ್ ಗೆ ಮಾಲೀಕರು ಶಾಶ್ವತವಾಗಿ ಮಾಲೀಕರಾಗುವುದಿಲ್ಲ. ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಿದರೆ ಮಾತ್ರ ವ್ಯಾಪಾರ ಮಾಡಲು ಅಧಿಕಾರವಿರುತ್ತದೆ. ಶೇ. 90 ರಷ್ಟು ಮಾಲೀಕರು ಶುಲ್ಕ ಪಾವತಿಸಿ ನವೀಕರಣ ಮಾಡಿಸಿಕೊಂಡರೆ ಉಳಿದವರು ನವೀಕರಣ ಮಾಡಿಸುತ್ತಿಲ್ಲ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read