24ರ ಹರೆಯದ ಯುವತಿಯನ್ನು ವರಿಸಿದ್ದಾನೆ 65 ವರ್ಷದ ವೃದ್ಧ, 6 ಮಕ್ಕಳ ತಂದೆಗೆ ಮರು ಮದುವೆ…..!

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 65 ವರ್ಷದ ವ್ಯಕ್ತಿಯೊಬ್ಬ ತನಗಿಂತ 41 ವರ್ಷ ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಈತ ಈಗಾಗ್ಲೇ 6 ಹೆಣ್ಣುಮಕ್ಕಳ ತಂದೆ. ಇದೀಗ 24ರ ಹರೆಯದ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆಯಲ್ಲಿ ಮುದುಕನ ಸಖತ್‌ ಡಾನ್ಸ್‌ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗ್ತಿದೆ. ಜಾಮಿನ್ ಹುಸೇನಪುರ ಎಂಬ ಗ್ರಾಮದ ನಿವಾಸಿ, 65 ವರ್ಷದ ಈ ವ್ಯಕ್ತಿಯ ಹೆಸರು ನಖೇದ್.

ಈತ 24 ವರ್ಷದ ನಂದಿನಿ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಮೊದಲನೆ ಹೆಂಡತಿಯಿಂದ ಇವನಿಗೆ 6 ಹೆಣ್ಣುಮಕ್ಕಳಿದ್ದಾರೆ. ಈಗಾಗ್ಲೇ ಮೊಮ್ಮಕ್ಕಳು ಸಹ ಇದ್ದಾರೆ. ಇಡೀ ಕುಟುಂಬದ ಸಮ್ಮುಖದಲ್ಲಿ ಈತ ಎರಡನೇ ಮದುವೆಯಾಗಿದ್ದಾನೆ. ಮದುವೆಯ ಮೆರವಣಿಗೆಯಲ್ಲಿ ನಖೇದ್‌ ಭರ್ಜರಿ ಡಾನ್ಸ್‌ ಮಾಡಿದ್ದಾನೆ. ಈ ವಿಚಿತ್ರ ಮದುವೆ ಇಡೀ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.ವಧು ನಂದಿನಿಗೆ ಆತನ ಮಗಳ ವಯಸ್ಸು.

ನಖೇದ್ ಮತ್ತು ನಂದಿನಿ, ರುದೌಲಿ ಪ್ರದೇಶದ ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ವಿವಾಹವಾದರು. ನಖೇದ್ ತನ್ನ ಮೊದಲ ಪತ್ನಿಯ ಮರಣದ ನಂತರ ಒಂಟಿಯಾಗಿದ್ರು. ಮನೆಯವರ ಒಪ್ಪಿಗೆ ಮೇರೆಗೆ ಮತ್ತೆ ಮದುವೆಯಾಗಲು ನಿರ್ಧರಿಸಿದ್ದ. ಆತನ ಎಲ್ಲಾ ಮಕ್ಕಳಿಗೆ ಕೂಡ ಈಗಾಗ್ಲೇ ಮದುವೆಯಾಗಿದೆ. ಕಳೆದ ತಿಂಗಳು ಗೋರಖ್‌ಪುರದಲ್ಲಿ 70 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಸೊಸೆಯನ್ನು ಮದುವೆಯಾಗಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read