ಮೆಕ್ಸಿಕೋದ ಸೊನೊರಾ ರಾಜ್ಯದ ಸೂಪರ್ ಮಾರ್ಕೆಟ್ ನಲ್ಲಿ ಸ್ಫೋಟ, ಅಗ್ನಿ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಸೊನೊರಾದ ವಾಲ್ಡೋ ಸೂಪರ್ ಮಾರ್ಕೆಟ್ ನಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 23 ಜನರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ವೀಕೆಂಡ್ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳಿಗೆ ಹೆಚ್ಚು ಜನರು ಬಂದಿದ್ದರು. ಈ ವೇಳೆ ಸ್ಪೋಟದಿಂದ ಬೆಂಕಿ ಹರಡಿ ಮಕ್ಕಳು ಸೇರಿದಂತೆ 23 ಜನರು ಸಾವನ್ನಪ್ಪಿದ್ದಾರೆ. 23ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಲಿಯಾದವರಲ್ಲಿ ಹಲವರು ಅಪ್ರಾಪ್ತ ವಯಸ್ಕರು ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ವೀಡಿಯೊ ಸಂದೇಶವನ್ನು ಸೋನೊರಾ ಗವರ್ನರ್ ಅಲ್ಫೊನ್ಸೊ ಡುರಾಜೊ ಹಂಚಿಕೊಂಡಿದ್ದಾರೆ, “ದುಃಖಕರವೆಂದರೆ, ನಾವು ಕಂಡುಕೊಂಡ ಕೆಲವು ಬಲಿಪಶುಗಳು ಮಕ್ಕಳಾಗಿದ್ದಾರೆ.” ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ದೃಢಪಡಿಸಿದ್ದು, ಘಟನೆಯ ಕಾರಣಗಳನ್ನು ತಿಳಿಯಲು ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
