ʼಸೇನೆʼ ಸೇರುವ ಕನಸು ಕಂಡವನ ದುರಂತ ಅಂತ್ಯ ; ಮನಕಲಕುತ್ತೆ ಕಣ್ಣೀರಿಟ್ಟ ಯುವಕನ ವಿಡಿಯೋ | Watch

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಗರ್ವಾ ಗ್ರಾಮದಲ್ಲಿ ರವಿದಾಸ್ ಸಿಂಗ್ (22) ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆಗೆ ಆಯ್ಕೆಯಾಗಿದ್ದ ರವಿದಾಸ್, ಸಾಲದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದಾನೆ.

ರವಿದಾಸ್ ಸಿಂಗ್, ಸುಜಿತ್ ಕುಶ್ವಾಹ ಎಂಬಾತನಿಂದ 22 ಸಾವಿರ ರೂಪಾಯಿ ಸಾಲ ಮಾಡಿದ್ದ. ಆದರೆ, ಆತ 1.5 ಲಕ್ಷ ರೂಪಾಯಿ ಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದ. ಅಲ್ಲದೆ, ರವಿದಾಸ್ ನ ಪೋಷಕರಿಂದ 40 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಇದರಿಂದ ಮನನೊಂದ ರವಿದಾಸ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಮುನ್ನ ರವಿದಾಸ್ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ತನ್ನ ಪೋಷಕರಿಗೆ ಕ್ಷಮೆ ಕೇಳಿದ್ದಾನೆ. ಅಲ್ಲದೆ, ತನ್ನ ಸಾವಿಗೆ ಸಾಲದ ಕಿರುಕುಳವೇ ಕಾರಣ ಎಂದು ಹೇಳಿದ್ದಾನೆ. ರವಿದಾಸ್ ನ ಮೊಬೈಲ್ ಫೋನ್ ನಲ್ಲಿ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಚಾಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಸಾಲದ ಕಿರುಕುಳದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರವಿದಾಸ್ ನ ತಂದೆ ರೈತರಾಗಿದ್ದು, ತಾತ ನಿವೃತ್ತ ಸೇನಾ ಅಧಿಕಾರಿಯಾಗಿದ್ದರು. ರವಿದಾಸ್ ಸಹ ಸೇನೆಗೆ ಆಯ್ಕೆಯಾಗಿದ್ದ. ಆದರೆ, ಸಾಲದ ಕಿರುಕುಳದಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ದೆಹ್ರಿಯಾ ತಿಳಿಸಿದ್ದಾರೆ. ಅಕ್ರಮ ಸಾಲದ ಕಿರುಕುಳಕ್ಕೆ ಒಳಗಾಗುವವರು ತಕ್ಷಣ ಪೊಲೀಸರ ಸಹಾಯ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read