2024 ರ ʼಯುಗಾದಿʼ ವರ್ಷ ಭವಿಷ್ಯ

ಯುಗಾದಿ ಹಬ್ಬದ ಹೊಸ ಸಂವತ್ಸರ ಶ್ರೀ ಕ್ರೋಧಿ ನಾಮಸಂವತ್ಸರದ ಶುಭಾಶಯಗಳು, ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರು ಆಯಸ್ಸು, ಆರೋಗ್ಯ, ಸಂತೋಷ, ಆರ್ಥಿಕ ಅಭಿವೃದ್ಧಿ ಎಲ್ಲವನ್ನು ನೀಡಲಿ.

ಇಂದು ಮಂಗಲ‌ಸ್ನಾನ‌ ಮಾಡಿ.
ನವಧಾನ್ಯ, ಅಕ್ಕಿ ಬೆಲ್ಲ ತರಕಾರಿ, ಚಿನ್ನ, ಬೆಳ್ಳಿ ಮನೆಗೆ ಖರೀದಿ ಮಾಡಿ ತೆಗೆದುಕೊಂಡು ಬನ್ನಿ.

ಸಾಲ‌ ಮಾಡಬೇಡಿ, ಸಾಲ ಕೊಡಬೇಡಿ, ಸಾಲ‌ ಮಾಡಿ ಯಾವುದೇ ವಸ್ತು ‌ಖರೀದಿ ಮಾಡಬೇಡಿ.

ಒಂದಷ್ಟು‌ ಒಳ್ಳೆಯ‌ ಮಾತು, ಒಳ್ಳೆಯ ವಿಷಯ ಮಾತು‌ ನಿಮ್ಮದಾಗಿರಲಿ.

ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ |
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||

ಯುಗಾದಿಯ ದಿನ ಪಂಚಾಂಗಕ್ಕೆ ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ ಬೇವು ಬೆಲ್ಲ ಸವಿಯಿರಿ.
ಈ ಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ, ಸಿಹಿಯ
ಬೆಲ್ಲದ ಸವಿ ಫಲಗಳೇ ಹೆಚ್ಚು ಲಭಿಸಲಿ.

ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಯವೇತ್ ||

ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ
ನೆಮ್ಮದಿಯಿಂದ
ಇರುವಂತಾಗಲಿ.

ಕ್ರೋಧಿನಾಮ ಸಂವತ್ಸರದಲ್ಲಿ :- ಮಳೆ, ಬೆಳೆ ಖಂಡ ಮಂಡಲವು, ಧರಿತ್ರಿಯ ಮೇಲೆ ಹದಿನೆಂಟು ಜಾತಿಗಳು ವ್ರತಗೆಟ್ಟು ನಡೆವುದು. ಅಲ್ಲಿಗಲ್ಲಿಗೆ ರಾಜೀಕ ಪುಟ್ಟುವದು, ಧಾನ್ಯಗಳು ರಸವರ್ಗಗಳು ಮಾರುಗುಂ, ಗ್ರಹಣವಕ್ಕುಂ. ಭಕ್ತನೇ ನೀಚನಾದಾನು, ನೀಚನೇ ಭಕ್ತನಾದಾನು, ಗಂಡರುಳ್ಳವರು ಜಾರ ಸ್ತ್ರೀಯರಾದರು. ಉತ್ತರ ದೇಶಕ್ಕೆ ಬರನಕ್ಕುಂ, ಮತ್ತೆ ಈ ಸಂವತ್ಸರಕ್ಕೆ ಶುಕ್ರಸ್ವಾಮಿ. ಮಳೆ, ಬೆಳೆ ಮಧ್ಯಮ, ಮಂದವಾಸಂಗಳು ಇರಬೇಕು. ಚೈತ್ರ, ವೈಶಾಖದಲ್ಲಿ ಧಾರಣಿ ಮಂದ. ಜೇಷ್ಠ ಆಷಾಢ, ಶ್ರಾವಣದಲ್ಲಿ ಧಾನ್ಯಕ್ಕೆ ಅರಿಷ್ಟ. ಭಾದ್ರಪದ ಆಶ್ವಿನದಲ್ಲಿ ಸ್ವಸ್ಥವು, ಲೋಕಕ್ಕೆ ಮಹಾಪೀಡಾಕರವು. ಮಾರ್ಗಶಿರ, ಪುಷ್ಯದಲ್ಲಿ ಧಾರಣಿಯಾದೀತು.

ರಾಜಾ ಮಂಗಳನ ಫಲವು :- “ಭೌಮೇನ್ನವೇ ವಹ್ನಿಭಯಂ ಜನ ಕ್ಷಯಂ ಚೋರಾ ಕುಲಂ ಪಾರ್ಥಿವ ವಿಗ್ರಹಂಚ | ದುಃಖಂ ಪ್ರಜಾವ್ಯಾಧಿ ವಿಯೋಗ ಪೀಡಾ ಸ್ವಲ್ಪಂಪಯೋ ಮುಂಚತಿವಾರಿ ವಾಹಾಃ

ಮಂಗಳನು ರಾಜನಾದರೆ : ಮಳೆ, ಬೆಳೆಗಳು ಸ್ವಲ್ಪವಾದರೂ ಕೆಂಪು ಭೂಮಿ, ಕೆಂಪು ಧಾನ್ಯಗಳು ಮಾತ್ರ ಉತ್ತಮವಾಗಿ ಫಲಿಸುವವು. ಭೂಮಂಡಲದಲ್ಲಿ ಅಗ್ನಿ ಭಯ, ಕೊಲೆ, ಕಲಹಗಳು ಹೆಚ್ಚಾಗಿ ಸಂಭವಿಸಿ ಜನರು ನಾನಾ ವಿಧವಾದ ತೊಂದರೆಗೀಡಾಗುವರು. ಚೋರರ ಹಾವಳಿ ಹೆಚ್ಚುವದು. ರಾಜ್ಯಕ್ರಾಂತಿಯ ಲಕ್ಷಣ ಕಂಡುಬರುವದಲ್ಲದೆ ಪ್ರಜೆಗಳಿಗೆ ಅಧಿಕ ಕಷ್ಟ ಉಂಟಾಗುವದು.

ಮಂತ್ರಿ ಶನಿಯ ಫಲವು :- “ರವಿಸುತೇಮಂತ್ರಿಣಿ ಪಾರ್ಥಿವಾವಿನಿಯ ಸಂರಹಿತಾ ಬಹುದುಃಖದಾಃ | ನಜಲದಾ ಜಲದಾಜನ ತಾಪದಾಜನಪದೇಷು ಸುಖಂಧನದಂ ಕ್ವಚಿತ್||

ಶನಿಯು ಮಂತ್ರಿಯಾದರೆ:- ನಾಡನಾಯಕರೂ, ರಾಜ್ಯಾಧಿಕಾರಿಗಳೂ ಗರ್ವಿಷ್ಟರಾಗಿ ಉದ್ದಟತನದಿಂದ ವರ್ತಿಸುವ ಮೂಲಕ ತೊಂದರೆಗೊಳಗಾಗುವರು. ತನ್ಮೂಲಕ ಪ್ರಜೆಗಳೂ ದುಃಖಭಾಗಿಗಳಾಗುವರು. ಮಳೆಯು ಸಕಾಲಕ್ಕೆ ಆಗದಿರುವದರಿಂದ ಕೃಷಿಕರಿಗೆ ಪರಿತಾಪವಾಗುವದು. ಕಲಹ, ದಂಗೆಗಳುಂಟಾಗಿ ಜನರಲ್ಲಿ ಅಶಾಂತಿಯುಂಟಾಗಿ ಸುಖಸಮಾಧಾನಗಳಿಗೆ ಎರವಾಗುವರು, ಆರ್ಥಿಕ ಅಡಚಣೆಯಿಂದ ವರ್ತಕರು ವಿಚಾರಶೂನ್ಯರಾಗುವರು. ಹಣದ ಕೊರತೆಯಿಂದ ದೇಶೋನ್ನತಿಯ ಕಾರ್ಯಗಳಿಗೆ ಅಡ್ಡಿ ಆತಂಕಗಳುಂಟಾಗುವವು.

ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 
ಧಾರ್ಮಿಕ‌ ಚಿಂತಕರು,ಜೋತಿಷ್ಯರು, ಸಲಹೆಗಾರರು
ಮೊಬೈಲ್: 8548998564

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read