ಯಮಹಾ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌‌: ಮೈಲೇಜ್, ಟಾಪ್ ಸ್ಪೀಡ್ ಕುರಿತು ಇಲ್ಲಿದೆ ಮಾಹಿತಿ

2023 Yamaha Neo's Electric Scooter - New Colour Launched, Price Hike

ಯಮಹಾ ಇಂಡಿಯಾ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್‌ ’ನಿಯೋ’ವನ್ನು ಡೀಲರ್‌ಗಳಿಗೆ ತೋರ್ಪಡಿಸಿದೆ. ಸದ್ಯ ಭಾರತದಲ್ಲಿ ಏರೋಕ್ಸ್‌ 155, ರೇಜ಼ಡ್‌ಆರ್‌ ಸ್ಟ್ರೀಟ್‌ ರ‍್ಯಾಲಿ 125 ಎಫ್‌ಐ ಹಾಗೂ ಫ್ಯಾಸಿನೋ ಸ್ಕೂಟರ್‌ಗಳನ್ನು ಯಮಹಾ ಮಾರಾಟ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ ವಿಭಾಗದಲ್ಲಿ ಕಳೆದ ವಿತ್ತೀಯ ವರ್ಷದಲ್ಲಿ 188 ಪ್ರತಿಶತದಷ್ಟು ಮಾರಾಟದಲ್ಲಿ ಪ್ರಗತಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಹೆಜ್ಜೆ ಇಟ್ಟಿದೆ ಯಮಹಾ.

ಇ01 ಹಾಗೂ ನಿಯೋ ಸ್ಕೂಟರ್‌ಗಳ ಮೂಲಕ ಜಾಗತಿಕ ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿದೆ ಯಮಹಾ.

ನಿಯೋ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೊಸ ಫೀಚರ್‌ಗಳು ಹಾಗೂ ಬಣ್ಣಗಳನ್ನು ಪರಿಚಯಿಸಿದೆ ಯಮಹಾ. 2023ರ ನಿಯೋ ಮಾಡೆಲ್‌ಗೆ ಹೊಸ ಟರ್ಕೈಸ್‌ ಬಣ್ಣದ ಆಯ್ಕೆಯನ್ನು ಸೇರಿಸಿದೆ. ಮಿಕ್ಕಂತೆ ಮಿಡ್‌ನೈಟ್ ಬ್ಲಾಕ್ ಹಾಗೂ ಮಿಲ್ಕಿ ವೈಟ್ ಬಣ್ಣಗಳಲ್ಲಿ ನಿಯೋ ಲಭ್ಯವಿದೆ.

ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೂ, ಎಲ್‌ಇಡಿ ಡಿಆರ್‌ಎಲ್‌ಗಳು, ಟೇಲ್ ಲ್ಯಾಂಪ್‌ಗಳು ಹಾಗೂ ನಂಬರ್‌ ಪ್ಲೇಟ್‌ಗಳನ್ನು ಹೊಂದಿರುವ ನಿಯೋ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಎಲ್‌ಇಡಿ ಪರದೆಯನ್ನೂ ಹೊಂದಿದೆ. ಈ ಸ್ಕ್ರೀನ್‌ನಲ್ಲಿ ಬ್ಯಾಟರಿ ಸ್ಟೇಟಸ್, ಕರೆಗಳು, ಸಂದೇಶಗಳು ಹಾಗೂ ರೂಟ್ ಟ್ರ‍್ಯಾಕಿಂಗ್ ಸವಲತ್ತುಗಳು ಸವಾರನಿಗೆ ಸಿಗಲಿವೆ.

ತೆರೆಯಬಲ್ಲ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಜೋಡಣೆಯಾದ 2.03 ಕಿವ್ಯಾ ಎಲೆಕ್ಟ್ರಿಕ್‌ ಮೋಟರ್‌ ಹೊಂದಿರುವ ನಿಯೋ, ಒಮ್ಮ ಚಾರ್ಜ್ ಮಾಡಿದಲ್ಲಿ 70ಕಿಮೀ ಮೈಲೇಜ್ ನೀಡುತ್ತದೆ ಎಂದು ಯಮಹಾ ಹೇಳಿಕೊಂಡಿದೆ. ಸ್ಕೂಟರ್‌ನ ಟಾಪ್ ಸ್ಪೀಡ್‌ ಅನ್ನು 40ಕಿಮೀ/ಗಂಟೆಗೆ ಸೀಮಿತಗೊಳಿಸಲಾಗಿದೆ. ಸ್ಕೂಟರ್‌ನ ಬ್ಯಾಟರಿ ಪೂರ್ಣವಾಗಿ ಚಾರ್ಜ್ ಆಗಲು 8 ಗಂಟೆಗಳು ಬೇಕು.

ಯೂರೋಪ್ ಮಾರುಕಟ್ಟೆಯಲ್ಲಿ 2023 ನಿಯೋನ ಬೆಲೆಯು 3.24 ಲಕ್ಷ ರೂ.ಗಳಿದೆ. ಭಾರತದ ಮಾರುಕಟ್ಟೆಯಲ್ಲಿ ಅದಾಗಲೇ ಓಡುತ್ತಿರುವ ಅಥೆರ್‌ 450ಎಕ್ಸ್‌, ಟಿವಿಎಸ್‌ ಐಕ್ಯೂಬ್, ಬಜಾಜ್ ಚೇತಕ್, ಹೀರೋ ವಿಡಾಗಳೊಂದಿಗೆ ಪೈಪೋಟಿಗೆ ಇಳಿಯಲಿರುವ ಯಮಹಾದ ಎಲೆಕ್ಟ್ರಿಕ್ ಸ್ಕೂಟರ್‌‌ ಬೆಲೆಯು 1.5 ಲಕ್ಷ ರೂ.ಗಳ ರೇಂಜ್‌ನಲ್ಲಿರುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read