ಹೊಸ ರೂಪದಲ್ಲಿ ಟಾಟಾ ಸಿಯೆರಾ: ಎಕ್ಸ್​ಪೋದಲ್ಲಿ ಗ್ರಾಹಕನ ಮನಗೆದ್ದ ವಾಹನ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್​ಪೋನಲ್ಲಿ ಹಲವಾರು ವಾಹನಗಳು ಮನಸೂರೆಗೊಂಡಿವೆ. ಅವುಗಳಲ್ಲಿ ಒಂದು ಪ್ರೀ-ಪ್ರೊಡಕ್ಷನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಹೊಸ ಟಾಟಾ ಸಿಯೆರಾ. ಇದೀಗ ಟಾಟಾ ಸಿಯೆರಾ ಒಳಾಂಗಣದ ಸ್ನೀಕ್ ಪೀಕ್ ಬಿಡುಗಡೆಯಾಗಿದ್ದು, ಗ್ರಾಹಕರು ಇದನ್ನು ಅಪ್ಪಿಕೊಳ್ಳುವ ನಿರೀಕ್ಷೆ ಇದೆ.

ಟಾಟಾ ಸಿಯೆರಾ ಆರಂಭಿಸಲಾದ ದಿನಗಳಲ್ಲಿ ಜನರು ಅದನ್ನು ಅಷ್ಟು ಇಷ್ಟ ಪಡಲಿಲ್ಲ. ಮಾರುಕಟ್ಟೆಯಲ್ಲಿ ಇದು ಅಷ್ಟೊಂದು ಪ್ರಭಾವ ಬೀರಲಿಲ್ಲ. ಈಗಿನ ಜೀವನ ಶೈಲಿಗೆ ಹೊಂದಿಕೊಳ್ಳುವಷ್ಟರ ಮಟ್ಟಿಗೆ ಇದು ಇಲ್ಲ ಎಂದೇ ವಿಶ್ಲೇಷಿಸಲಾಯಿತು. ಆದ್ದರಿಂದ ಜೀವನಶೈಲಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಟಾಟಾ ಮೋಟಾರ್ಸ್ ಸಿಯೆರಾವನ್ನು ಕೂಡ ಹೊಸದಾಗಿ ವಿನ್ಯಾಸಗೊಳಿಸಿದೆ.

ಸಿಯೆರಾ ಡೀಸೆಲ್​ನಿಂದ ಪೆಟ್ರೋಲ್ ವಾಹನವಾಗಿ ಪರಿವರ್ತನೆ ಮಾಡಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್​ ವಾಹನವಾಗಿಯೂ ರೂಪಾಂತರಗೊಳಿಸಲಾಗಿದೆ. ಇದರ ಎಕ್ಸ್​ಪೋ ದೆಹಲಿಯಲ್ಲಿ ನಡೆಯಿತು. ಈ ಹೊಸ ರೂಪಾಂತರದ ಒಳಾಂಗಣ ವಿನ್ಯಾಸವು ಗ್ರಾಹಕರ ಮನಸ್ಸನ್ನು ಸೂರೆಗೊಂಡಿದೆ. ಇದರ ಆಸನಗಳಲ್ಲಿ ಬದಲಾವಣೆಗಳಾಗಿವೆ. ಸಿಯೆರಾ ಟಾಗಲ್‌ಗಳು ಮತ್ತು ಬಟನ್‌ಗಳೊಂದಿಗೆ ಫ್ಯೂಚರಿಸ್ಟಿಕ್ ಸ್ಟೀರಿಂಗ್ ಚಕ್ರವನ್ನು ಹೊಂದಿವೆ.

ಮುಂಬರುವ ಟಾಟಾ ಸಿಯೆರಾ 5 ಬಾಗಿಲುಗಳನ್ನು ಹೊಂದಿದೆ, ಇದು ಹಳೆಯ ಸಿಯೆರಾ ಮಾದರಿಗಿಂತ ಭಿನ್ನವಾಗಿದೆ. 2 ಹೆಚ್ಚುವರಿ ಬಾಗಿಲುಗಳೊಂದಿಗೆ ಶೀಘ್ರವೇ ಮಾರುಕಟ್ಟೆಗೆ ಬದಲಿದೆ ಎಂದಿದೆ ಕಂಪೆನಿ.

2023 Tata Sierra Interiors

2023 Tata Sierra Interiors

2023 Tata Sierra Interiors

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read