ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ

ವಾಹನ ಪ್ರಿಯರಿಗೆ ಗುಡ್​ ನ್ಯೂಸ್​ ಕೊಟ್ಟಿದೆ ಹ್ಯುಂಡೈ. ಭಾರತದಲ್ಲಿ ಬಹುನಿರೀಕ್ಷಿತ ‘ಔರಾ ಫೇಸ್‌ಲಿಫ್ಟ್’ ಆವೃತ್ತಿಯನ್ನು ಕಂಪೆನಿ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 ಟೋಕನ್ ಮೊತ್ತಕ್ಕೆ ಬುಕಿಂಗ್ ಶುರುವಾಗಿತ್ತು. ಇದರ ಪೆಟ್ರೋಲ್ ಇ ವೇರಿಯಂಟ್‌ ಬೆಲೆ 6.29 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದ್ದು, ಸಿಎನ್‌ಜಿ ಎಸ್‌ಎಕ್ಸ್ ವೇರಿಯಂಟ್‌ ಬೆಲೆ 8.87 ಲಕ್ಷ ರೂಪಾಯಿಗಳು.

ಔರಾ ಫೇಸ್‌ಲಿಫ್ಟ್ ಬಹುತೇಕ ಹಿಂದಿನ ಮಾದರಿಗೆ ಹೋಲುತ್ತದೆ. ಬೇಸ್ ರೂಪಾಂತರ ಹೊರತುಪಡಿಸಿ, ಬೇರೆಲ್ಲ ಮಾದರಿಗಳು ಬೂಟ್-ಲಿಡ್ ಸ್ಪಾಯ್ಲರ್ ಅನ್ನು ಹೊಂದಿವೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಬದಲಾಗಿಲ್ಲ. ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್ ಇದೆ.

ಆದರೆ ಫ್ರಂಟ್ ಡಿಸೈನ್ ಇನ್ನಷ್ಟು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಸೆಡಾನ್ ನಲ್ಲಿ ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಬಂಪರ್‌ನ ಅಂಚಿನಲ್ಲಿ ಇರುವಂತೆ ವಿನ್ಯಾಸ ಮಾಡಲಾಗಿದೆ. 15-ಇಂಚಿನ ಅಲಾಯ್ ವೀಲ್ಸ್ ಮತ್ತು LED ಟೈಲ್-ಲೈಟ್‌ಗಳನ್ನು ಹೊಂದಿದೆ. ಜೊತೆಗೆ ಸೈಡ್ ಅಥವಾ ರೇರ್ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಹಿಂದಿನ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ ಕ್ಸ್‌ಗೆ ಜೋಡಿಸಲಾಗಿದೆ. ಇದು 83 hp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read