ರಸ್ತೆಗಿಳಿಯಲು ಬಂದಿವೆ ಬಜಾಜ್ ಪಲ್ಸರ್‌ NS200, NS160 ಮಾಡೆಲ್‌ಗಳು

ತನ್ನ ಅತ್ಯಂತ ಜನಪ್ರಿಯ ಬೈಕುಗಳಾದ ಪಲ್ಸರ್‌ NS200 ಹಾಗೂ NS160 ಗಳ 2023ರ ಮಾಡೆಲ್‌ಗಳನ್ನು ಬಜಾಜ್ ಆಟೋ ಬಿಡುಗಡೆ ಮಾಡಿದೆ. ಈ ಬೈಕುಗಳ ಎಕ್ಸ್‌ಶೋ ರೂಂ ಬೆಲೆ (ದೆಹಲಿ) 1.47 ಲಕ್ಷ ಹಾಗೂ 1.35 ಲಕ್ಷ ರೂ. ಗಳಷ್ಟಿದೆ.

ಬಹು ವಿಭಾಗಗಳಲ್ಲಿ ಹೊಸ ಫೀಚರ್‌ಗಳು ಸೇರಿದಂತೆ ಹೊಸ ಗ್ರಾಫಿಕ್ಸ್‌ಗಳು ಮತ್ತು ಬಣ್ಣದ ಆಯ್ಕೆಗಳನ್ನು ಈ ಬೈಕ್ ಒಳಗೊಂಡಿದೆ. ಈ ಬೈಕುಗಳ ಹೊಚ್ಚ ಹೊಸ ಮಾಡೆಲ್‌ಗಳು 30ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ.

ಫಾರ್ವಡ್‌-ಬಯಾಸ್ಡ್‌ ರೈಡಿಂಗ್ ಸ್ಟಾನ್ಸ್‌ನೊಂದಿಗೆ ಈ ಬೈಕುಗಳು ಬ್ಲಾಕ್ ಕ್ರೋಮ್, ಕಂದು ಹಾಗೂ ಕಾರ್ಬನ್ ಫೈಬರ್‌ಗಳ ಟಚಿಂಗ್‌ ಸಹ ಪಡೆದಿವೆ. ಮೆಟಾಲಿಕ್ ಪರ್ಲ್ ಬಿಳಿ, ಗ್ಲಾಸಿ ಎಬೋನಿ ಬ್ಲ್ಯಾಕ್, ಸ್ಯಾಟಿನ್ ರೆಡ್ ಮತ್ತು ಪೀವ್ಟರ್‌ ಗ್ರೇ ಬಣ್ಣಗಳಲ್ಲಿ ಈ ಬೈಕುಗಳು ಲಭ್ಯವಿವೆ.

“ಎನ್‌ಎಸ್‌ ಸರಣಿಯು ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದಲ್ಲಿ ಮೋಟರ್‌ಸೈಕ್ಲಿಂಗ್ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಮತ್ತು ಹೊಸ ಪಲ್ಸರ್‌ನೊಂದಿಗೆ ನಾವು ಸ್ಟೈಲ್ ಹಾಗೂ ಕ್ಷಮತೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಕೊಡುತ್ತೇವೆ ಎಂದು ಅವರು ನಿರೀಕ್ಷಿಸುತ್ತಾರೆ. ನಾವು ಇದೇ ಕೆಲಸವನ್ನು NS200 ಹಾಗೂ NS160ಗಳ ವಿಚಾರದಲ್ಲಿ ಮಾಡಿದ್ದೇವೆ,” ಎನ್ನುತ್ತಾರೆ ಬಜಾಜ್ ಆಟೋ ಲಿ.ನ ರಾಕೇಶ್ ಶರ್ಮಾ.

ಈ ಬೈಕುಗಳ ಬ್ರೇಕಿಂಗ್‌ ಅನ್ನು 300ಎಂಎಂ ಮುಂಬದಿ ಡಿಸ್ಕ್‌ ಹಾಗೂ 230 ಎಂಎಂ ಹಿಂಬದಿ ಡಿಸ್ಕ್‌ಗಳು ನಿರ್ವಹಿಸುತ್ತವೆ. NS160 ಇನ್ನಷ್ಟು ಅಗಲವಾದ ಚಕ್ರಗಳ ಮೇಲೆ ಓಡುತ್ತದೆ (100/80-17 F, 130/70-17 R). ಎರಡೂ ಬೈಕ್‌ಗಳಲ್ಲಿ ಅಪ್ಸೈಡ್ ಡೌನ್ ಫೋರ್ಕ್‌ಗಳನ್ನು ಅಳವಡಿಸಲಾಗಿದೆ.

NS200ನಲ್ಲಿ ಬಜಾಜ್‌ನ ಪೇಟೆಂಟೆಡ್ ಆಗಿರುವ 199.5 ಸಿಸಿ ಟ್ರಿಪಲ್ ಸ್ಪಾರ್ಕ್ ಡಿಟಿಎಸ್‌-ಐ 4V ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು, ಇದರಿಂದ 24.3 ಬಿಎಚ್‌ಪಿ ಶಕ್ತಿ ಹಾಗೂ 18.7 ಎನ್‌ಎಂ ಟಾರ್ಕ್ ಉತ್ಪಾದನೆಯಾಗುತ್ತದೆ. ತನ್ನ ಹಿಂದಿನ ಅವತರಣಿಕೆಗಳಿಗಿಂತ ಈ ಬೈಕ್‌ನ ತೂಕ 1.15 ಕೆಜಿಯಷ್ಟು ಕಡಿಮೆ ಇದೆ. ಆರು ಸ್ಪೀಡ್‌ನ ಗೇರ್‌ ಬಾಕ್ಸ್‌ ಬೈಕಿನ ಮತ್ತೊಂದು ವಿಶೇಷ. ಇದೇ ವೇಳೆ 2023 ಬಜಾಜ್ ಪಲ್ಸರ್‌ NS160 ಬೈಕಿಗೆ 160.3 ಸಿಸಿ ಟ್ವಿನ್ ಸ್ಪಾರ್ಕ್ ಎಫ್ಐ ಡಿಟಿಎಸ್‌-ಐ ಪೆಟ್ರೋಲ್ ಇಂಜಿನ್‌ 17 ಬಿಎಚ್‌ಪಿ ಹಾಗು 14.6 ಎನ್‌ಎಂ ಟಾರ್ಕ್ ಬಲ ನೀಡುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read