SHOCKING NEWS: ಜ್ಯೂಸ್ ಎಂದು ಕೀಟನಾಶಕ ಸೇವಿಸಿದ ಮಗು… ದಾರುಣ ಸಾವು

ರಾಮನಗರ: ಮಕ್ಕಳ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ಇಲ್ಲೊರ್ವ ಪುಟ್ಟ ಕಂದಮ್ಮ ಜ್ಯೂಸ್ ಎಂದು ಭಾವಿಸಿ ಕೀಟನಾಶಕ ಸೇವಿಸಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

2 ವರ್ಷದ ಯಶ್ವಿಕ್ ಮೃತ ಮಗು. ಪುಷ್ಪ ಹಾಗೂ ಹನುಮಂತ ದಂಪತಿಯ ಮಗು. ಮಗುವಿನ ತಂದೆ ಹನುಮಂತ, ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು ದ್ರಾವಕವನ್ನು ತಂದಿದ್ದರು. ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಬಾಟಲಿಯಲ್ಲಿರುವುದು ಜ್ಯೂಸ್ ಎಂದು ಮಗು ಕಿಟನಾಶಕವನ್ನು ಕುಡಿದಿದೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಗವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೇ ಮಗು ಕೊನೆಯುಸಿರೆಳೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read