ಕಾರ್ಯಕ್ರಮದ ಸಿದ್ದತೆಯಲ್ಲಿದ್ದಾಗಲೇ ಕುಸಿದು ಬಿದ್ದ ಅಪ್ರಾಪ್ತ; ಹೃದಯಾಘಾತಕ್ಕೆ ಬಲಿ

ಹಠಾತ್​ ಹೃದಯಾಘಾತದಿಂದ ಅಪ್ರಾಪ್ತ ಸಾವನ್ನಪ್ಪಿದ ಘಟನೆಯು ರಾಜಾಕೋಟ್​ ಹಾಗೂ ಗಿರ್​ ಸೋಮನಾಥ್​ ಜಿಲ್ಲೆಗಳಲ್ಲಿ ಸಂಭವಿಸಿದೆ. ರಾಜ್​ಕೋಟ್ ನಗರದ ಹೊರವಲಯದಲ್ಲಿರುವ ರಿಬ್ಡಾ ಗ್ರಾಮದ ಎಸ್​​ಜಿವಿಪಿ ಗುರುಕುಲದ ವಿದ್ಯಾರ್ಥಿ ಹದಿನೈದು ವರ್ಷದ ದೇವಾಂಶ್​ ಭಯಾನಿ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ತಯಾರಿ ನಡೆಸುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಧೋರಜಿ ಪಟ್ಟಣ ಮೂಲದ ಭಯಾಜಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ತಯಾರಿಯಲ್ಲಿ ಇದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕೂಡಲೇ ಭಯಾಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಭಯಾಜಿ ಹೈಪರ್ಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೊಮಿಯೋಪತಿ ಬಳಲುತ್ತಿದ್ದರು ಎನ್ನಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವೇದಿಕೆಯನ್ನು ಸರಿ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

ಭಯಾನಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತರು ಹೃದಯ ಸಂಬಂಧಿ ಅಸಹಜತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಮೃತಪಟ್ಟ ಭಯಾನಿ ಹೆಚ್​ಒಟಿಸಿಯಿಂದ ಬಳಲುತ್ತಿದ್ದರು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ, ಈ ಕಾಯಿಲೆ ಇರುವವವರ ರಕ್ತನಾಳಗಳು ದಪ್ಪಗಾಗುತ್ತದೆ. ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ರಾಜ್​ಕೋಟ್​ ಸಿವಿಲ್​ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read