BIG NEWS : 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ : ನಿಯಮದಲ್ಲಿ ಸಡಿಲಿಕೆಯಿಲ್ಲ-ಸಚಿವ ಮಧುಬಂಗಾರಪ್ಪ ಸ್ಪಷ್ಟನೆ

ಬೆಂಗಳೂರು: 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಮಗುವಿಗೆ 6 ವರ್ಷವಾಗಿರಬೇಕು ಎಂಬ ನಿಯಮದಲ್ಲಿ ಯಾವುದೇ ಸಡಿಲಿಕೆ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಈ ನಿಯಮದಲ್ಲಿ ಸಡಿಲಿಕೆ ಮಾಡಲು ಸಾಧ್ಯವಿಲ್ಲ. ಅನೇಕರು ಈ ಬಗ್ಗೆ ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ಕೂಡ ಅವರ ಅರ್ಜಿ ವಜಾಗೊಳಿಸಿದೆ. ಕೋರ್ಟ್ ತೀರ್ಪು ಏನು ನೀಡಲಿದೆ ಹಾಗೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

6 ವರ್ಷ ತುಂಬಲು ಒಂದು ತಿಂಗಳು, ಎರಡು ತಿಂಗಳು ಕಡಿಮೆಯಿದ್ದರೆ ಒಂದು ಮಗುವಿಗೆ ಅವಕಶ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. 1ನೇ ತರಗತಿ ದಾಖಲಾತಿ ಮಾಡಿಕೊಳ್ಳಲು 6 ವರ್ಷವಾಗಿರಬೇಕು ಎಂಬುದು ಕಡ್ಡಾಯ. ನಿಯಮವನ್ನು ನಾವು ಪಾಲಿಸಲೇಬೇಕು. ಈ ವಿಚಾರ ಕೋರ್ಟ್ ನಲ್ಲಿರುವುದರಿಂದ ಕೋರ್ಟ್ ತೀರ್ಮಾನ ಕೈಗೊಂಡಂತೆ ನಾವು ಪಾಲಿಸುತ್ತೇವೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read