ʼತಾರೆ ಜಮೀನ್ ಪರ್ʼ ನಂತರ 17 ವರ್ಷಗಳ ಬಳಿಕ ಅಮೀರ್‌ ಜೊತೆ ಮತ್ತೆ ತೆರೆ ಮೇಲೆ ಕಾಣಿಸಿಕೊಂಡ ದರ್ಶೀಲ್ ಸಫಾರಿ

ಕೋಕಾ-ಕೋಲಾ ಕಂಪನಿಯ ಹೊಸ ಪಾನೀಯ ಬ್ರ್ಯಾಂಡ್ ಆದ ಚಾರ್ಜ್ಡ್ ಥಮ್ಸ್ ಅಪ್ ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಅವರನ್ನು ಒಳಗೊಂಡಿರುವ “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್” ಎಂಬ ತನ್ನ ಹೊಸ ಅಭಿಯಾನವನ್ನು ಅನಾವರಣಗೊಳಿಸಿದೆ.

ಒಗಿಲ್ವಿ ಪರಿಕಲ್ಪನೆ ಮಾಡಿರುವ ಈ ಹೊಸ ಜಾಹೀರಾತಿನಲ್ಲಿ ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಲಾರ್ಜರ್ ದ್ಯಾನ್ ಲೈಫ್ ಸನ್ನಿವೇಶಗಳಲ್ಲಿ ವಿವಿಧ ಅವತಾರಗಳಲ್ಲಿ ಕಾಣಲು ಸಿಗುತ್ತಾರೆ. ದೈಹಿಕ ಚುರುಕುತನ ಮತ್ತು ಮಾನಸಿಕ ಎಚ್ಚರವನ್ನು ಬಯಸುವ ಅಸಾಧ್ಯವಾದ ಸಾಧನೆಗಳನ್ನು ಸಾಧಿಸಲು ಚಾರ್ಜ್ಡ್ ಪಾನೀಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ಉದ್ದೇಶ ಈ ಜಾಹೀರಾತಿಗೆ ಇದೆ. ಈ ಅಭಿಯಾನವು ಉತ್ಪನ್ನದ ಉತ್ತೇಜಕ ಪರಿಣಾಮಗಳನ್ನು ಪ್ರದರ್ಶಿಸುತ್ತದೆ, ಆ ಮೂಲಕ ಜೀವನದ ಸವಾಲುಗಳನ್ನು ಎದುರಿಸಲು ಜೆನ್-ಝಡ್ ಗೆ ಪ್ರೇರೇಪಣೆ ನೀಡುತ್ತದೆ.

ಅಭಿಯಾನದೊಂದಿಗಿನ ತನ್ನ ಒಡನಾಟದ ಕುರಿತು ಪ್ರತಿಕ್ರಿಯಿಸಿದ ಅಮೀರ್ ಖಾನ್, “ಇದು ನಿಜವಾಗಿಯೂ ಮಜಾ ಸ್ಕ್ರಿಪ್ಟ್ ಆಗಿದೆ, ಮತ್ತು ನಾನು ಈ ಪರಿಕಲ್ಪನೆಯಿಂದ ನಿಜವಾಗಿಯೂ ‘ಚಾರ್ಜ್ಡ್’ ಆಗಿದ್ದೇನೆ. ಥಮ್ಸ್ ಅಪ್/ಕೋಕ್ ಕುಟುಂಬದ ಭಾಗವಾಗಲು ನನಗೆ ಸಂತೋಷವಾಗಿದೆ. ಜಾಹೀರಾತು ಅಭಿಯಾನ ಪ್ರಸಾರವಾಗುವುದನ್ನು ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.

ಈ ​​ಕುರಿತು ಪ್ರತಿಕ್ರಿಯಿಸಿದ ದರ್ಶೀಲ್ ಸಫಾರಿ, “ತಾರೆ ಜಮೀನ್ ಪರ್ ನಂತರ 17 ವರ್ಷಗಳ ಬಳಿಕ ಅಮೀರ್ ಖಾನ್ ಅವರೊಂದಿಗೆ ತೆರೆಯ ಮೇಲೆ ಮತ್ತೆ ಒಂದಾಗುತ್ತಿರುವುದು ಸಂತೋಷ ತಂದಿದೆ. ಯುವ ವ್ಯಕ್ತಿ ನಾನು ಚಾರ್ಜ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಚಾರ್ಜ್ಡ್ ಪಾನೀಯವು ಜೀವವನ್ನು ಚೈತನ್ಯ ಮತ್ತು ಉತ್ಸಾಹದಿಂದ ಎದುರುಗೊಳ್ಳಲು ಪ್ರೇರೇಪಿಸುತ್ತದೆ” ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read