ಉತ್ತರ ಪ್ರದೇಶದ ಅಯೋಧ್ಯೆಯ ಮೌ ಶಿವಾಲಾದಲ್ಲಿರುವ ಸನ್‌ಬೀಮ್ ಶಾಲೆಯಲ್ಲಿ ಅನನ್ಯ ಶ್ರೀವಾಸ್ತವ ಎಂಬ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ವಿದ್ಯಾರ್ಥಿನಿಯ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು ಬಾಲಕಿಯ ಮೇಲೆ ಅತ್ಯಾಚಾರವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಬೇಸಿಗೆ ರಜೆ ಇದ್ರೂ ಬಾಲಕಿಯನ್ನ ಶಾಲೆಗೆ ಕರೆಸಿಕೊಳ್ಳಲಾಗಿತ್ತು ಎಂದು ಪ್ರಾಂಶುಪಾಲರ ನಡೆ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಕಟ್ಟಡದ ಮೇಲಿಂದ ಬಿದ್ದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದರ ಪರಿಣಾಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಶಾಲೆಯಲ್ಲಿನ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಬಾಲಕಿ ಶಾಲೆಯ ಮೇಲಿಂದ ಕೆಳಗೆ ಬೀಳುವ ದೃಶ್ಯ ಸೆರೆಯಾಗಿದೆ. ಆಕೆಯ ತಲೆ, ಕಾಲುಗಳು ಮತ್ತು ಸೊಂಟದ ಮೇಲೆ ಹೆಚ್ಚಿನ ಗಾಯಗಳಾಗಿದ್ದು ಪೋಷಕರು ಸಾವಿಗೂ ಮುನ್ನ ಅನುಮಾನಾಸ್ಪದ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
https://twitter.com/aditytiwarilive/status/1662299995679391745?ref_src=twsrc%5Etfw%7Ctwcamp%5Etweetembed%7Ctwterm%5E1662299995679391745%7Ctwgr%5E5d0b08bdde55fcace10094254146f818ce3dfaa5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fup15yearoldgirlfallstodeathfromschoolbuildinginayodhyachillingcctvfootagesurfaces-newsid-n503741774