ಶಾಲೆಯಲ್ಲೇ ಶಾಕಿಂಗ್ ಘಟನೆ: ಚಾಕುವಿನಿಂದ ಇರಿದು 15 ವರ್ಷದ ವಿದ್ಯಾರ್ಥಿ ಹತ್ಯೆಗೈದ ಸಹಪಾಠಿ

ಕಾನ್ಪುರ: ಇಲ್ಲಿನ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ಕೊಂದ ಘಟನೆ ಸೋಮವಾರ ನಡೆದಿದೆ.

ಇಬ್ಬರ ನಡುವೆ ಜಗಳ ನಡೆದಿದ್ದು, ನಂತರ ಘಟನೆ ನಡೆದಿದೆ. ಕಾನ್ಪುರದ ಬಿದ್ನು ಪ್ರದೇಶದ ಗೋಪಾಲಪುರಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಊಟದ ವಿರಾಮದ ವೇಳೆ ಈ ಘಟನೆ ನಡೆದಿದೆ.

ಇಬ್ಬರ ಸಹಪಾಠಿಗಳ ಪ್ರಕಾರ, 13 ವರ್ಷದ ಆರೋಪಿಯು ನೀಲೇಂದ್ರ ತಿವಾರಿ(15) ಕುತ್ತಿಗೆಗೆ ಮತ್ತು ಸುತ್ತಲೂ ಪದೇ ಪದೇ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಹೆಚ್ಚುವರಿ ಡಿಸಿಪಿ(ದಕ್ಷಿಣ) ಅಂಕಿತಾ ಶರ್ಮಾ ತಿಳಿಸಿದ್ದಾರೆ.

ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಶಾಲೆಗೆ ಆಗಮಿಸಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ನೀಲೇಂದ್ರನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಗಂಗಾಪುರ ಕಾಲೋನಿ ನಿವಾಸಿ ಸತೇಂದ್ರ ತಿವಾರಿ ಅವರ ಏಕೈಕ ಪುತ್ರ ನೀಲೇಂದ್ರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಕೆಲವು ದಿನಗಳ ಹಿಂದೆ ನೀಲೇಂದ್ರ ತಿವಾರಿ ತನಗೆ ಗಂಭೀರವಾದ ಪರಿಣಾಮ ಬೀರುವ ಬೆದರಿಕೆ ಹಾಕಿದ್ದ. ತಿವಾರಿಯನ್ನು ಹೆದರಿಸಲು ಮಾತ್ರ ಚಾಕುವನ್ನು ತಂದಿದ್ದೆ. ಯಾರಿಗೂ ಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಆರೋಪಿ ವಿದ್ಯಾರ್ಥಿ ತಿಳಿಸಿದ್ದಾನೆ ಎಂದು ಎಡಿಸಿಪಿ ತಿಳಿಸಿದ್ದಾರೆ.

ವಿಚಾರಣೆ ನಂತರ ಆರೋಪಿ ವಿದ್ಯಾರ್ಥಿಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read