ಬಾಲಕಿ ಅಪಹರಿಸಿ ಅತ್ಯಾಚಾರ, ಕೊಲೆ ಬೆದರಿಕೆ

ಗುರ್ಗಾಂವ್: 15 ವರ್ಷದ ಬಾಲಕಿ ಮೇಲೆ ಆಕೆಗೆ ಪರಿಚಯವಿದ್ದ ಹಾಲಿನ ವ್ಯಾಪಾರಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಬಾಲಕಿ ವಿರೋಧಿಸಲು ಪ್ರಯತ್ನಿಸಿದಾಗ ಆಕೆಯನ್ನು ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಆರೋಪಿಗಳಾದ ಹಾಲಿನ ವ್ಯಾಪಾರಿ ವಿನೋದ್ ಮತ್ತು ಆತನ ಸ್ನೇಹಿತ ಜಸ್ಬೀರ್ ವಿರುದ್ಧ ಅಪ್ರಾಪ್ತ ಬಾಲಕಿ ತಾಯಿಯ ದೂರಿನ ಆಧಾರದ ಮೇಲೆ ಶುಕ್ರವಾರದಂದು ಬೋಂಡ್ಸಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 6 ಮತ್ತು ಐಪಿಸಿ 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

8ನೇ ತರಗತಿ ವಿದ್ಯಾರ್ಥಿನಿಯಾಗಿರುವ ತನ್ನ ಮಗಳು ಶುಕ್ರವಾರ ಬೆಳಗ್ಗೆ ಹಾಲು ತರಲು ಮಾರುತಿ ಕುಂಜ್ ಬಳಿ ವಿನೋದ್ ನನ್ನು ಭೇಟಿಯಾಗಿದ್ದಳು. ಜಸ್ಬೀರ್ ನೊಂದಿಗೆ ತನ್ನ ಮೋಟಾರ್‌ ಸೈಕಲ್‌ ನಲ್ಲಿ ಬೋಂಡ್ಸಿ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಅಪ್ರಾಪ್ತೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ನಂತರ ಅವರಿಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನನ್ನ ಮಗಳು ವಿರೋಧಿಸಿದಾಗ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ ದೊಣ್ಣೆಯಿಂದ ಥಳಿಸಿ ಒಂಟಿಯಾಗಿ ಬಿಟ್ಟು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read