ಭಾರತೀಯ ಬಾಲಕನಿಂದ ಅದ್ಭುತ ಸಾಧನೆ: ʼನಾಸಾʼ ಯೋಜನೆಯಲ್ಲಿ ಕ್ಷುದ್ರ ಗ್ರಹ ಪತ್ತೆ

ನೋಯ್ಡಾದ ಶಿವ ನಾಡರ್ ಶಾಲೆಯ 14 ವರ್ಷದ ಬಾಲಕ ದಕ್ಷ್ ಮಲಿಕ್‌, ಮಂಗಳ ಮತ್ತು ಗುರು ಗ್ರಹಗಳ ನಡುವಿನ ಬೆಲ್ಟ್‌ನಲ್ಲಿರುವ ಒಂದು ಕ್ಷುದ್ರ ಗ್ರಹವನ್ನು ಕಂಡುಹಿಡಿದಿದ್ದು, ಈ ಕ್ಷುದ್ರ ಗ್ರಹಕ್ಕೆ ಅವರೇ ಹೆಸರಿಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ನಾಸಾದ ಅಂತರರಾಷ್ಟ್ರೀಯ ಕ್ಷುದ್ರ ಗ್ರಹ ಅನ್ವೇಷಣಾ ಯೋಜನೆಯಲ್ಲಿ ಭಾಗವಹಿಸಿದ ದಕ್ಷ್, ತನ್ನ ಶಾಲೆಯ ಸಹಪಾಠಿಗಳೊಂದಿಗೆ ಸುಮಾರು ಒಂದೂವರೆ ವರ್ಷಗಳ ಕಾಲ ಕ್ಷುದ್ರ ಗ್ರಹಗಳನ್ನು ಹುಡುಕುತ್ತಿದ್ದ. ಹವಾಯಿಯ ಪ್ಯಾನ್-ಸ್ಟಾರ್ಸ್ ಟೆಲಿಸ್ಕೋಪ್‌ನಿಂದ ಪಡೆದ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ಅವರುಗಳು ಈ ಕ್ಷುದ್ರ ಗ್ರಹವನ್ನು ಕಂಡುಹಿಡಿದಿದ್ದಾರೆ.

ದಕ್ಷ್ ಮತ್ತು ಆತನ ಸ್ನೇಹಿತರು ತಮ್ಮ ಶಾಲೆಯ ಖಗೋಳಶಾಸ್ತ್ರ ಕ್ಲಬ್ ಮೂಲಕ ಈ ಯೋಜನೆಯ ಬಗ್ಗೆ ತಿಳಿದುಕೊಂಡಿದ್ದರು. ನಾಸಾದ ಈ ಯೋಜನೆಯಲ್ಲಿ ಪ್ರಪಂಚದಾದ್ಯಂತ ಸುಮಾರು 6500 ಜನರು ಭಾಗವಹಿಸುತ್ತಾರೆ ಆದರೆ ಕೆಲವೇ ಜನರಿಗೆ ಕ್ಷುದ್ರ ಗ್ರಹಗಳನ್ನು ಕಂಡುಹಿಡಿಯುವ ಅವಕಾಶ ಸಿಗುತ್ತದೆ. ದಕ್ಷ್ ಆ ಅದೃಷ್ಟಶಾಲಿಗಳಲ್ಲಿ ಒಬ್ಬರು.

ದಕ್ಷ್ ಇನ್ನೂ ಈ ಕ್ಷುದ್ರ ಗ್ರಹಕ್ಕೆ ಹೆಸರಿಡುವ ಕೆಲಸವನ್ನು ಮಾಡಿಲ್ಲ. ಅವರು ” ‘Destroyer of the World” ಮತ್ತು “ಕೌಂಟ್‌ಡೌನ್” ಎಂಬ ಎರಡು ಹೆಸರುಗಳಲ್ಲಿ ಯೋಚಿಸುತ್ತಿದ್ದಾರೆ. ಆದರೆ ಈ ಹೆಸರು ಅಂತಿಮವಾಗಿ ಅಂತರರಾಷ್ಟ್ರೀಯ ಖಗೋಳ ಸಂಸ್ಥೆಯ ಅನುಮೋದನೆ ಪಡೆಯಬೇಕು.

ನಾಸಾ ಈ ಕ್ಷುದ್ರ ಗ್ರಹವನ್ನು ಮತ್ತೊಮ್ಮೆ ಗಮನಿಸಿ ಅದು ನಿಜಕ್ಕೂ ಕ್ಷುದ್ರ ಗ್ರಹವೇ ಎಂದು ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ 4-5 ವರ್ಷಗಳ ಸಮಯ ಹಿಡಿಯಬಹುದು. ನಂತರ ಈ ಕ್ಷುದ್ರ ಗ್ರಹಕ್ಕೆ ಅಧಿಕೃತ ಹೆಸರನ್ನು ನೀಡಲಾಗುತ್ತದೆ.

ದಕ್ಷ್‌ ನ ಈ ಸಾಧನೆ ಬಹಳ ದೊಡ್ಡದು. ಇದು ಭಾರತದ ಯುವ ವಿಜ್ಞಾನಿಗಳಿಗೆ ಪ್ರೇರಣೆಯಾಗಿದೆ. ಅವನ ಈ ಸಾಧನೆಗೆ ಅವನ ಶಾಲೆ, ಶಿಕ್ಷಕರು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read