ಬಿಲಾಸ್ಪುರ (ಹಿಮಾಚಲ ಪ್ರದೇಶ ) : ಬಿಲಾಸ್ಪುರ ಜಿಲ್ಲೆಯ ಪನೋಹ್ ಗ್ರಾಮದಲ್ಲಿ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಹತ್ತನೇ ತರಗತಿಯ ವಿದ್ಯಾರ್ಥಿ ಮನೆಯಲ್ಲಿದ್ದಾಗ ಟಿವಿ ನೋಡುತ್ತಿದ್ದನು.ಆದರೆ ತಾಯಿ ಹೆಚ್ಚು ಹೊತ್ತು ಟಿವಿ ನೋಡಬೇಡ ಹೋಮ್ ವರ್ಕ್ ಮಾಡಿಕೋ ಎಂದು ಹೇಳಿದ್ದಾರೆ. ನಂತರ ಆ ಹುಡುಗ ಮನೆಯಿಂದ ಹೊರಟುಹೋಗಿದ್ದಾನೆ. ಅವನು ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಅವನನ್ನು ಹುಡುಕಲು ಪ್ರಾರಂಭಿಸಿದರು.
ನಂತರ ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಘಟನೆಯ ನಂತರ, ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕನ ಶವವನ್ನು ಘುಮಾರ್ವಿ ಆಸ್ಪತ್ರೆಗೆ ಕೊಂಡೊಯ್ದರು . ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
TAGGED:14 ವರ್ಷದ ಬಾಲಕ
