ನವದೆಹಲಿ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ಮಸೂದ್ ಕುಟುಂಬದ 14 ಮಂದಿ ಬಲಿಯಾಗಿದ್ದಾರೆ.
ಮಸೂದ್ ಅಝರ್ ಸಹೋದರ , ಸಹೋದರಿ ಸೇರಿ 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಣ್ಣೀರಿಟ್ಟ ಉಗ್ರ ಮಸೂದ್
ಭಾರತೀಯ ಸೇನೆ ದಾಳಿಗೆ ನನ್ನ ಕುಟುಂಬದ ಎಲ್ಲರೂ ಬಲಿಯಾಗಿದ್ದಾರೆ. ನನ್ನ ಕುಟುಂಬವೇ ನಾಶವಾಗಿದೆ. ದಾಳಿಯಲ್ಲಿ ನಾನು ಸತ್ತರೆ ಚೆನ್ನಾಗಿರುತ್ತಿತ್ತು,ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಉಗ್ರ ಮಸೂದ್ ಹೇಳಿದ್ದಾನೆ.
ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ 9 ಅಡಗುತಾಣ, ಟ್ರೈನಿಂಗ್ ಕ್ಯಾಂಪ್ ಉಡೀಸ್ ಆಗಿದೆ. ಭಾರತೀಯ ಸೇನೆಯ ಯೋಧರ ಕಾರ್ಯಾಚರಣೆಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತವು ಬುಧವಾರ ಮುಂಜಾನೆ 1:44 ಕ್ಕೆ ‘ಆಪರೇಷನ್ ಸಿಂಧೂರ್’ ನಲ್ಲಿ ನಿಖರ ದಾಳಿ ನಡೆಸಿತು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದವು.
#WATCH |Delhi | #OperationSindoor| Wing Commander Vyomika Singh says, "Operation Sindoor was launched by the Indian Armed Forces to deliver justice to the victims of the Pahalgam terror attack and their families. Nine terrorist camps were targeted and successfully destroyed…… pic.twitter.com/Gmw6WHrYVO
— ANI (@ANI) May 7, 2025