ಕೋಟ: ಮಹಾಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಶಿವ ಬಾರಾತ್ ನಲ್ಲಿ ಪಾಲ್ಗೊಂಡಿದ್ದ 14 ಮಕ್ಕಳಿಗೆ ವಿದ್ಯುತ್ ಸ್ಪರ್ಶದಿಂದ ಸುಟ್ಟ ಗಾಯಗಳಾಗಿವೆ.
ಕುನ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಕಟೂರಾ ಪ್ರದೇಶದಲ್ಲಿ 10-16 ವರ್ಷ ವಯಸ್ಸಿನ ಮಕ್ಕಳು ಹೈಟೆನ್ಷನ್ ವಿದ್ಯುತ್ ತಂತಿಯಿಂದ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಗಾಯಗೊಂಡಿದ್ದಾರೆ.
ಇಬ್ಬರು ಮಕ್ಕಳಿಗೆ ಕ್ರಮವಾಗಿ 100 ಮತ್ತು 50 ರಷ್ಟು ಸುಟ್ಟ ಗಾಯಗಳಾಗಿದ್ದು, ಉಳಿದ 12 ಮಕ್ಕಳಿಗೆ ಶೇಕಡ 50 ಕ್ಕಿಂತ ಕಡಿಮೆ ಗಾಯಗಳಾಗಿವೆ. ಎಲ್ಲರನ್ನೂ ಕೋಟಾದ ಎಂಬಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11.30-12ರ ಸುಮಾರಿಗೆ ‘ಶಿವ ಬಾರಾತ್’ ಮೆರವಣಿಗೆಯು ಕಾಳಿಬಸ್ತಿ ಮೂಲಕ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಮೆರವಣಿಗೆಯಲ್ಲಿದ್ದ ಬಾಲಕನೊಬ್ಬ 22 ಅಡಿ ಎತ್ತರದ ಬಿದಿರಿನ ಕೋಲಿನ ಮೇಲೆ ಧ್ವಜವನ್ನು ಹಿಡಿದುಕೊಂಡು ಹೈ-ಟೆನ್ಷನ್ ವೈರ್ ಮುಟ್ಟಿದ್ದಾನೆ. ಲೈನ್ ಓವರ್ ಹೆಡ್ ನಲ್ಲಿ ಹಾದುಹೋಗುತ್ತದೆ. ಧ್ವಜ ಹಿಡಿದಿದ್ದ ಬಾಲಕನಿಗೆ ಶೇ 100ರಷ್ಟು ಸುಟ್ಟ ಗಾಯವಾಗಿದೆ ಎಂದು ಕೋಟಾ ನಗರ ಎಸ್ಪಿ ಅಮೃತಾ ದುಹಾನ್ ತಿಳಿಸಿದರು.
ಅವರನ್ನು ರಕ್ಷಿಸಲು ಪ್ರಯತ್ನಿಸಿದ ಇತರ ಹುಡುಗರಿಗೂ ಸುಟ್ಟ ಗಾಯಗಳಾಗಿವೆ, ಒಬ್ಬ ಹುಡುಗನಿಗೆ ಶೇಕಡ 50 ರಷ್ಟು ಸುಟ್ಟ ಗಾಯವಾಗಿದೆ ಮತ್ತು ಉಳಿದ 12 ಹುಡುಗರಿಗೆ ಶೇಕಡಾ 50 ಕ್ಕಿಂತ ಕಡಿಮೆ ಗಾಯಗಳಾಗಿವೆ ಎಂದು ಅವರು ಹೇಳಿದರು.
#WATCH | Rajasthan: Kota SP Amrita Duhan says, "It's a very sad incident. People from the Kaali Basti were gathered here with their Kalash, a child was carrying a pipe of 20-22 ft that touched the high-tension wire. In an attempt to save that child, all the children present there… https://t.co/wbKIEB0GN7 pic.twitter.com/VkNZOSk371
— ANI (@ANI) March 8, 2024