ಕಾಂಬೋಡಿಯಾದಲ್ಲಿ 5 ಸಾವಿರ ಭಾರತೀಯರ ಒತ್ತೆ: ರಾಯಭಾರ ಕಚೇರಿಯಿಂದ 75ಕ್ಕೂ ಅಧಿಕ ಮಂದಿ ರಕ್ಷಣೆ

ಕಾಂಬೋಡಿಯಾದಲ್ಲಿ 5,000 ಭಾರತೀಯರನ್ನು ಒತ್ತೆಯಾಗಿಟ್ಟುಕೊಳ್ಳಲಾಗಿದೆ. ಡೇಟಾ ಎಂಟ್ರಿ ಉದ್ಯೋಗದ ಆಮಿಷವೊಡ್ಡಿ ಭಾರತೀಯರನ್ನು ವಂಚಿಸಲಾಗಿದ್ದು, ಒತ್ತೆಯಾಗಿಟ್ಟುಕೊಂಡು ಸೈಬರ್ ಕ್ರೈಂ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಾಲದಲ್ಲಿ ಸಿಲುಕಿರುವ ಮಾಹಿತಿ ಇದೆ.

ಕಾಂಬೋಡಿಯಾದಲ್ಲಿ ಸಿಲುಕಿರುವ ಭಾರತೀಯರ ಸುಮಾರು 130 ದೂರುಗಳನ್ನು ನೋಮ್ ಪೆನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ವೀಕರಿಸಿದೆ. ಸೈಬರ್ ವಂಚನೆಗಳನ್ನು ನಡೆಸಲು ಬಲವಂತವಾಗಿ ಬಳಸಿಕೊಂಡಿದ್ದ 75 ಜನರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಎರಡನೇ ಕಾರ್ಯದರ್ಶಿ(ಕಾನ್ಸುಲರ್ ಅಂಡ್ ಡಯಾಸ್ಪೊರಾ) ಅವರನ್ ಅಬ್ರಹಾಂ ತಿಳಿಸಿದ್ದಾರೆ.

5,000 ಕ್ಕೂ ಹೆಚ್ಚು ಭಾರತೀಯರನ್ನು ಕಾಂಬೋಡಿಯಾದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ. ಸೈಬರ್ ವಂಚನೆಗಳನ್ನು ನಡೆಸಲು ಬಲವಂತಪಡಿಸಲಾಗಿದೆ. ಸರ್ಕಾರದ ಅಂದಾಜಿನ ಪ್ರಕಾರ, “ವಂಚಕರು” ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ. ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದವರ ಪಾರ್ಸೆಲ್‌ಗಳಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಕಂಡುಕೊಂಡಿದ್ದಾಗಿ ಹೇಳುವ ಮೂಲಕ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಬೆದರಿಸಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯ(MHA) ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(MeitY), ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4C) ಮತ್ತು ಇತರ ಭದ್ರತಾ ತಜ್ಞರೊಂದಿಗೆ ಸಭೆ ನಡೆಸಿ ಕಾಂಬೋಡಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕಾರ್ಯತಂತ್ರ ರೂಪಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read