ಕಾಂಗ್ರೆಸ್ ಪಕ್ಷ ತೊರೆದ 12 ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸಬೇಕು: ರೇವಂತ್ ರೆಡ್ಡಿ

ಹೈದರಾಬಾದ್: ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರಗೊಂಡ 12 ಕಾಂಗ್ರೆಸ್ ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಮತ್ತೊಮ್ಮೆ ವಿವಾದ ಹುಟ್ಟುಹಾಕಿದ್ದಾರೆ.

ಹಾತ್ ಸೇ ಹಾತ್ ಜೋಡೋ ಯಾತ್ರೆಯ ಅಂಗವಾಗಿ ಕಾಮೆಪಲ್ಲಿ ಮಂಡಲದ ಲಚ್ಚತಂಡಾದಿಂದ ಕೋತಲಿಂಗಲ ವರೆಗೆ 11 ಕಿ.ಮೀ ಪಾದಯಾತ್ರೆ ನಡೆದ ನಂತರ ಕೋತಲಿಂಗಲದಲ್ಲಿ ನಡೆದ ಸಭೆಯನ್ನುದ್ದೇಶಿಸಿ ರೇವಂತ್ ರೆಡ್ಡಿ ಮಾತನಾಡಿದರು.

ಪಕ್ಷ ತೊರೆದಿರುವ 12 ಕಾಂಗ್ರೆಸ್ ಶಾಸಕರನ್ನು ರಾಜಕೀಯವಾಗಿ ನಾಶಪಡಿಸುವ ಜವಾಬ್ದಾರಿ ತೆಲಂಗಾಣ ಸಮಾಜದ ಮೇಲಿದೆ. ಆ ಶಾಸಕರಿಗೆ ಟಿಕೆಟ್ ಕೊಡಿಸಲು ರಾಹುಲ್ ಗಾಂಧಿ ಜತೆ ಹೋರಾಟ ನಡೆಸಿದ್ದೆ. ಆದರೆ ಯಾರದೋ ಒತ್ತಡಕ್ಕೆ ಮಣಿದು ಶಾಸಕರು ಪಕ್ಷ ಬದಲಾಯಿಸಿದ್ದಾರೆ. ಈ 12 ಮಂದಿಯನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸುವುದು ತಪ್ಪಲ್ಲ ಎಂದು ರೆಡ್ಡಿ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ನಿಜವಾಗಿಯೂ ಕೆಸಿಆರ್ ಅವರ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದರೆ, ಈ 12 ಶಾಸಕರ ವಿರುದ್ಧವೂ ಸಿಬಿಐ ತನಿಖೆ ನಡೆಸಬೇಕು. ಪಕ್ಷವನ್ನು ತೊರೆದ ನಂತರ ಅವರು ಮಾಡಿಕೊಂಡ ಲಾಭ ಮತ್ತು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read