ಪಾಟ್ನಾ: ಬಿಹಾರದ ಮುಜಾಫರ್ ಪುರದಲ್ಲಿ ಗುರುವಾರ (ಸೆಪ್ಟೆಂಬರ್ 14) ಬೆಳಿಗ್ಗೆ 34 ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ.
ದೋಣಿ ಮಗುಚಿದ ಪರಿಣಾಮ ಸುಮಾರು 12 ಮಂದಿ ಮಕ್ಕಳು ಕಾಣೆಯಾಗಿದ್ದಾರೆ ಮತ್ತು ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ಎನ್ ಡಿ ಆರ್ ಎಫ್ ಸ್ಥಳಕ್ಕೆ ಕರೆಸಲಾಗಿದೆ.
ಎನ್ ಡಿ ಆರ್ ಎಫ್ ತಂಡವು ಗೈಘಾಟ್ ಪ್ರದೇಶವನ್ನು ತಲುಪುತ್ತಿದ್ದು, ಬಾಗ್ಮತಿ ನದಿಯಲ್ಲಿ ಈ ಘೋರ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಹಲವಾರು ಮಕ್ಕಳನ್ನು ರಕ್ಷಿಸಲಾಗಿದೆ, ಇನ್ನೂ 12 ಮಕ್ಕಳ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
https://twitter.com/mishika_singh/status/1702206658750140795?ref_src=twsrc%5Etfw%7Ctwcamp%5Etweetembed%7Ctwterm%5E1702206658750140795%7Ctwgr%5E892b219426230689a944392d5e0649f107979825%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbihar-34-school-going-children-feared-drowned-after-boat-capsizes-in-muzaffarpur